ಮೈಸೂರಿನಲ್ಲಿ ಬುಧವಾರದಿಂದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಪ್ರಾರಂಭ
ಮೈಸೂರಿನಲ್ಲಿ ಬುಧವಾರದಿಂದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಪ್ರಾರಂಭ
ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್‌ರಿಂದ ಕೇಂದ್ರದ ಉದ್ಘಾಟನೆ
ಮೈಸೂರಿನ ಎಂ. ಜಿ. ರಸ್ತೆಯಲ್ಲಿ ನಿರ್ಮಿಸಲಾಗಿರುವ ಕ್ಯಾನ್ಸರ್ ರೋಗ ಕೇಂದ್ರವನ್ನು ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್ ಆಗಸ್ಟ್ 27ರ ಬುಧವಾರ ಉದ್ಘಾಟಿಸುವರು ಎಂದು ಕೇಂದ್ರದ ಅಧ್ಯಕ್ಷ ಡಾ. ಅನಿಲ್ ಥಾಮಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ಯಾನ್ಸರ್ ಕುರಿತು ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರತಿದಿನ ನಡೆಯುತ್ತಿರುವ ಆವಿಷ್ಕಾರಗಳ ಬಗ್ಗೆಯೂ ಈ ಕೇಂದ್ರದಲ್ಲಿ ವೈದ್ಯರಿಗೆ ಶಿಕ್ಷಣ ನೀಡಲಾಗುವುದು. ಅಲ್ಲದೆ ಕ್ಯಾನ್ಸರ್ ಕುರಿತು ಜಾಗೃತಿ ಶಿಬಿರಗಳನ್ನು ನಡೆಸುವುದು ಮತ್ತು ಸಾರ್ವಜನಿಕರಿಗೂ ಕ್ಯಾನ್ಸರ್ ಕುರಿತು ಶಿಕ್ಷಣ ನೀಡಲಾಗುವುದು ಎಂದು ಥಾಮಸ್ ಹೇಳಿದರು.
ಸದ್ಯದಲ್ಲೇ ಟೆಲಿ ಮೆಡಿಸಿನ್ ಹಾಗೂ ಕ್ಯಾನ್ಸರ್ ವಿಮಾ ಯೋಜನೆಯನ್ನೂ ಜಾರಿಗೊಳಿಸುವ ಉದ್ದೇಶವೂ ಈ ಕೇಂದ್ರಕ್ಕಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications