ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಪ್ಸಿ-ಕೋಲಾ ತಲೆ ಸವರುವ ಸರ್ಕಾರದ್ದು‘ಮನೆಗೆ ಮಾರಿ’ನೀತಿ

By Staff
|
Google Oneindia Kannada News

ಪೆಪ್ಸಿ-ಕೋಲಾ ತಲೆ ಸವರುವ ಸರ್ಕಾರದ್ದು‘ಮನೆಗೆ ಮಾರಿ’ನೀತಿ
ಓದುಗರೊಬ್ಬರ ಅಪರೂಪದ ಪತ್ರ

ಕಳೆದ 8 ವರ್ಷಗಳಲ್ಲಿ ಪೆಪ್ಸಿ, ಕೋಕಾಕೋಲಾ ಕಂಪನಿಗಳಿಗೆ ಕರ್ನಾಟಕ ಸರ್ಕಾರ 17 ಕೋಟಿ ರುಪಾಯಿ ತೆರಿಗೆ ವಿನಾಯಿತಿ ನೀಡಿದೆ. ಸರ್ಕಾರದ ದಿವಾಳಿಖೋರ ಧೋರಣೆಯಿಂದಾಗಿ ಸಣ್ಣ ಪ್ರಮಾಣದ 72 ಮೃದು ಪಾನೀಯ ಘಟಕಗಳು ಮುಚ್ಚಿವೆ.

ಈ ಧೋರಣೆ ನಿಜಕ್ಕೂ ಕಳವಳಕಾರಿಯಾಗಿದೆ. ಕಳೆದ 3 ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ, ಹೆಚ್ಚಾಗಿ ಉತ್ತರ ಕರ್ನಾಟಕದ ರೈತರು ಬರಗಾಲದಿಂದ ಬಳಲುತ್ತಿದ್ದಾರೆ. ಬರಗಾಲ ಪೀಡಿತ ರೈತರಿಗೆ ಶಾಶ್ವತ ಯೋಜನೆಗಳನ್ನು ರೂಪಿಸಲು ಸರ್ಕಾರದ ಹತ್ತಿರ ಫಂಡಿಲ್ಲ. ಇಂಥಾದ್ದರಲ್ಲಿ ಪೆಪ್ಸಿ , ಕೋಲಾ ಕಂಪನಿಗಳಿಗೆ ಧಾರಾಳ ತೆರಿಗೆ ವಿನಾಯಿತಿ ನೀಡುವುದು ಎಷ್ಟು ಸಮಂಜಸ ? ಒಟ್ಟಿನಲ್ಲಿ ಸರ್ಕಾರ ಮನೆಗೆ ಮಾರಿ, ಊರಿಗೆ ಉಪಕಾರಿ. ನಾನು ಈ ಧೋರಣೆಯನ್ನು ಖಂಡಿಸುತ್ತೇನೆ.
- ಉಮೇಶ ಅಣ್ಣಪ್ಪಾ ಮಧಭಾವೆ
ಅನಂತಪುರ

ಇದನ್ನೂ ಓದಿ-
ಪೆಪ್ಸಿ- ಕೋಲಾ ಕೋಲಾಹಲ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X