ಕರ್ನಾಟಕ ಸುಳ್ಳ,ನೀರುಕಳ್ಳ; ಚೆನ್ನೈನಲ್ಲಿ ಚಂದ್ರಬಾಬು ಪರಾಕ್ರಮ
ಕರ್ನಾಟಕ ಸುಳ್ಳ,ನೀರುಕಳ್ಳ; ಚೆನ್ನೈನಲ್ಲಿ ಚಂದ್ರಬಾಬು ಪರಾಕ್ರಮ
ರಾಜ್ಯದ ವಿರುದ್ಧ ತಮಿಳುನಾಡಿನ ವಕಾಲತ್ತು ವಹಿಸಿದ ಆಂಧ್ರದ ಮುಖ್ಯಮಂತ್ರಿ
ಕರ್ನಾಟಕ ಅನಧಿಕೃತ ಜಲಾಶಯಗಳನ್ನು ನಿರ್ಮಿಸಿದೆ ಹಾಗೂ ಯಾವಾಗಲೂ ದೊಡ್ಡಣ್ಣನಂತೆ ವರ್ತಿಸುತ್ತದೆ ಎಂದು ನಾಯ್ಡು ಕರ್ನಾಟಕದ ಮೇಲೆ ಟೀಕಾ ಪ್ರಹಾರ ನಡೆಸಿದರು. ಚೆನ್ನೈನ ಮೀನಾಬಾಕಂ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಚಂದ್ರಬಾಬು ಮಾತನಾಡಿದರು.
ಅನುಕೂಲಕರ ಜಲಾನಯನ ಪ್ರದೇಶದಲ್ಲಿರುವ ಕರ್ನಾಟಕ ಹೆಚ್ಚು ನೀರನ್ನು ಕಬಳಿಸುತ್ತಿದೆ. ಪಕ್ಕದ ರಾಜ್ಯಗಳೊಂದಿಗೆ ಮಾತನಾಡದೆ ಇಷ್ಟಬಂದಂತೆ ಜಲಾಶಯಗಳನ್ನು ನಿರ್ಮಿಸಿದೆ. ಕಾವೇರಿ ನೀರನ್ನು ತಮಿಳುನಾಡಿನೊಂದಿಗೆ ಹಂಚಿಕೊಳ್ಳಲು ಹಾಗೂ ಆಲಮಟ್ಟಿ ನೀರನ್ನು ಆಂಧ್ರದೊಂದಿಗೆ ಹಂಚಿಕೊಳ್ಳಲು ಕರ್ನಾಟಕ ನಿರಾಕರಿಸುತ್ತಿದೆ ಎಂದು ಬಾಬು ಹೇಳಿದರು.
ಚೆನ್ನೈ ನಗರಕ್ಕೆ ಕೃಷ್ಣಾ ನದಿಯಿಂದ ನೀರು ಹರಿಸಲು ಆಂಧ್ರಪ್ರದೇಶ ಬದ್ಧವಾಗಿದೆ. ಪ್ರಸ್ತುತ ನದಿಯಲ್ಲಿ ನೀರಿಲ್ಲ . ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಪರಿಸ್ಥಿತಿ ಸುಧಾರಿಸಿದ ತಕ್ಷಣ ಚೆನ್ನೈ ಮಹಾನಗರಿಗೆ ಕೃಷ್ಣಾ ನದಿಯಿಂದ ನೀರು ಹರಿಸುವುದಾಗಿ ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯುದ್ದಕ್ಕೂ ಕರ್ನಾಟಕದ ವಿರುದ್ಧ ಟೀಕಾ ಪರಹಾರ ನಡೆಸಿದ ಚಂದ್ರಬಾಬು- ತಮಿಳುನಾಡು ವಕಾಲತ್ತನ್ನೂ ವಹಿಸಿ ಕರ್ನಾಟಕವನ್ನು ನೀರುಕಳ್ಳನೆಂದು ಜರಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications