ಒಕ್ಕಲಿಗರ ಸಂಘದ ಅಧ್ಯಕ್ಷ ಗಾದಿಗೆ ಪ್ರೊ.ವೆಂಕಟಗಿರಿಗೌಡ
ಒಕ್ಕಲಿಗರ ಸಂಘದ ಅಧ್ಯಕ್ಷ ಗಾದಿಗೆ ಪ್ರೊ.ವೆಂಕಟಗಿರಿಗೌಡ
ಚುನಾವಣೆಯಲ್ಲಿ ಕೆಂಚಪ್ಪಗೌಡರ ಬಣದ ಮೇಲುಗೈ
ಸೋಮವಾರ (ಜು.28) ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ 19 ನಿರ್ದೇಶಕರ ಬೆಂಬಲದೊಂದಿಗೆ ಪ್ರತಿಸ್ಪರ್ಧಿ ಹಾಗೂ ಈ ಹಿಂದಿನ ಅಧ್ಯಕ್ಷರಾಗಿದ್ದ ಡಾ.ಸಿ.ವಿಠಲ್ ಅವರನ್ನು ಹಿಂದಿಕ್ಕಿ, ವೆಂಕಟಗಿರಿ ಗೌಡ ಗಾದಿಗೆ ಚುನಾಯಿತರಾದರು. 35 ನಿರ್ದೇಶಕರ ಪೈಕಿ ವಿಠಲ್ ಅವರನ್ನು 16 ನಿರ್ದೇಶಕರು ಬೆಂಬಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎ.ಮಂಜು, ಉಪಾಧ್ಯಕ್ಷರಾಗಿ ಎಸ್.ಟಿ.ನಾರಾಯಣಗೌಡ ಹಾಗೂ ಎಂ.ಆಂಜನಪ್ಪ , ಜಂಟಿ ಕಾರ್ಯದರ್ಶಿಯಾಗಿ ಡಾ.ಹನುಮಂತೇಗೌಡ ಮತ್ತು ಖಜಾಂಚಿಯಾಗಿ ಬಿ.ಎಚ್.ಜಗದೀಶ್ ಆಯ್ಕೆಯಾಗಿದ್ದಾರೆ.
ಒಟ್ಟಾರೆಯಾಗಿ ಕೆಂಚಪ್ಪಗೌಡರ ಬಣ ಸಂಘದ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. ಈ ಬಣ ಬೆಂಬಲ ಕೊಟ್ಟಿದ್ದರಿಂದ ಪ್ರೊ.ವೆಂಕಟಗಿರಿ ಗೌಡ ಅಧ್ಯಕ್ಷರಾದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications