ತಿರುಪತಿ ದೇವಳದಲ್ಲಿ ಕ್ಯಾಮರಾ, ಸೆಲ್ ಫೋನ್ ಬಳಕೆ ನಿಷಿದ್ಧ
ತಿರುಪತಿ ದೇವಳದಲ್ಲಿ ಕ್ಯಾಮರಾ, ಸೆಲ್ ಫೋನ್ ಬಳಕೆ ನಿಷಿದ್ಧ
ರಕ್ಷಣಾ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ
ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನ ಭದ್ರತಾ ಅಧಿಕಾರಿ ದಾಮೋದರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಜಗತ್ತಿನಲ್ಲಿ 127 ಬಾರಿ ದುಷ್ಕರ್ಮಿಗಳು ಇಲೆಕ್ಟ್ರಾನಿಕ್ ಉಪಕರಣಗಳಿಂದ ಕಿಡಿ ಹೊಮ್ಮಿಸಿ ಅಸಂಖ್ಯ ಜನರ ಸಾವಿಗೆ ಕಾರಣರಾಗಿದ್ದಾರೆ. ತಿರುಪತಿಯ ಜನಸಂದಣಿಗೆ ರಕ್ಷಣಾ ವ್ಯವಸ್ಥೆ ಸರಿಯಾಗಿರಬೇಕು. ಭಕ್ತರು ಶಾಂತಿ ಹುಡುಕುತ್ತಾ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿಯೂ ಅವರಿಗೆ ಆಘಾತಗಳು ಎದುರಾಗಕೂಡದು. ಆ ಕಾರಣಕ್ಕಾಗಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ದೇವಳದ ಅಂಗಳಕ್ಕೆ ತರುವುದನ್ನು ನಿಷೇಧಿಸಿದ್ದೇವೆ ಎಂದು ದಾಮೋದರ್ ಹೇಳಿದರು.
ಒಂದು ವೇಳೆ ನಿಷೇಧವನ್ನು ಧಿಕ್ಕರಿಸಿ, ಯಾರಾದರೂ ದೇವಳಕ್ಕೆ ಮೊಬೈಲ್ ಮತ್ತಿತರ ಉಪಕರಣಗಳನ್ನು ತಂದರೆ ಅಂಥವರನ್ನು ಹೊರಕ್ಕೆ ಹಾಕುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ದೇವಳದ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications