ತರಂಗದ ಸಂಧ್ಯಾಪೈ, ಕವಿ ದೊಡ್ಡರಂಗೇಗೌಡರಿಗೆ ಅತ್ತಿಮಬ್ಬೆ ಪ್ರಶಸ್ತಿ
ತರಂಗದ ಸಂಧ್ಯಾಪೈ, ಕವಿ ದೊಡ್ಡರಂಗೇಗೌಡರಿಗೆ ಅತ್ತಿಮಬ್ಬೆ ಪ್ರಶಸ್ತಿ
ಸ್ವಾರ್ಥಿಗಳಿಂದ ಅತ್ತಿಮಬ್ಬೆ ಪ್ರತಿಷ್ಠಾನ ಬಳಕೆ- ಲಲಿತಾನಾಯಕ್ ಅಸಮಾಧಾನ
ಭಾನುವಾರ ನಗರದಲ್ಲಿ ನಡೆದ ಅತ್ತಿಮಬ್ಬೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಲಿತಾ ನಾಯಕ್ ಮಾತನಾಡುತ್ತಿದ್ದರು. ಸಂಘ ಸಂಸ್ಥೆಗಳು ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಟ್ರಸ್ಟ್‌ಗಳನ್ನು ಮಾಡಿಕೊಂಡವರು ಹಣ ನಿರ್ವಹಣೆಯನ್ನು ಜಾಗರೂಕತೆಯಿಂದ ಮಾಡಬೇಕು ಎಂದು ಲಲಿತಾನಾಯಕ್ ಮನವಿ ಮಾಡಿಕೊಂಡರು.
ಮನೋಹರಿ ಪಾರ್ಥಸಾರಥಿ ನೇತೃತ್ವದ ಈ ಪ್ರತಿಷ್ಠಾನ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಲಲಿತಾ ನಾಯಕ್ ಹೊಗಳಿದರು.
ಇತ್ತೀಚೆಗೆ ಅತ್ತಿಮಬ್ಬೆ ಪ್ರಶಸ್ತಿಯ ಮೌಲ್ಯ ಕಡಿಮೆಯಾಗಿದೆ. ಆದರ ಮೌಲ್ಯವನ್ನು ಹಾಳು ಮಾಡಬಾರದು ಎಂದು ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎನ್. ಬಸವಾರಾಧ್ಯ ಹೇಳಿದರು. ತರಂಗ ಪತ್ರಿಕೆಯ ಸಂಪಾದಕಿ ಸಂಧಾ ಪೈ ಹಾಗೂ ಕವಿ ದೊಡ್ಡರಂಗೇಗೌಡರಿಗೆ ಅತ್ತಿಮಬ್ಬೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications