ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಎಂಎನ್‌ಸಿಗಳ ಬೀಡು, ವಜ್ರ ಗಣಿಗಾರಿಕೆಗೆ ಸ್ಪೀಡು

By Staff
|
Google Oneindia Kannada News

ರಾಜ್ಯದಲ್ಲಿ ಎಂಎನ್‌ಸಿಗಳ ಬೀಡು, ವಜ್ರ ಗಣಿಗಾರಿಕೆಗೆ ಸ್ಪೀಡು
ಗಣಿಗಾರಿಕೆಗಾಗಿ 30 ಕಂಪೆನಿಗಳಿಗೆ ಸರಕಾರದ ಅನುಮತಿ

ಬೆಂಗಳೂರು : ತುಮಕೂರು, ಚಿತ್ರದುರ್ಗ, ಕೋಲಾರ, ಗದಗ ಹಾಗೂ ರಾಯಚೂರು ಜಿಲ್ಲೆಯ ವಿವಿಧೆಡೆಗಳಲ್ಲಿ ವಜ್ರ ಹಾಗೂ ಚಿನ್ನದ ಗಣಿಗಾರಿಕೆ ನಡೆಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮುಂದಿನ ವರ್ಷದಿಂದ ರಾಜ್ಯದಲ್ಲಿ ವಜ್ರ ಹಾಗೂ ಚಿನ್ನದ ಗಣಿಗಾರಿಕೆ ಪ್ರಾರಂಭವಾಗಲಿದೆ. ಗಣಿಗಾರಿಕೆ ನಡೆಸಲು 30 ಕಂಪನಿಗಳಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ. ಈ ಕಂಪನಿಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳೂ ಸೇರಿವೆ ಎಂದು ಗಣಿ ಸಚಿವ ವಿ.ಮುನಿಯಪ್ಪ ತಿಳಿಸಿದ್ದಾರೆ. ಜುಲೈ 8ರ ಮಂಗಳವಾರ ನಡೆದ ಭೂಸರ್ವೇಕ್ಷಣ ಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.

ಬಹುರಾಷ್ಟ್ರೀಯ ಕಂಪನಿಗಳಾದ ಡೀಬೀರ್ಸ್‌ , ಎಸಿಸಿ ಲಿಂಕ್ಟನ್‌ ಸೇರಿದಂತೆ ವಿವಿಧ ಕಂಪನಿಗಳು ಗಣಿಗಾರಿಕೆಗೆ ಪೂರ್ವಭಾವಿ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿವೆ. ಪ್ರಸ್ತುತ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 170 ಕೋಟಿ ರುಪಾಯಿ ಆದಾಯವಿದ್ದು , ಇನ್ನೆರಡು ವರ್ಷಗಳಲ್ಲಿ ಆದಾಯದ ಪ್ರಮಾಣ 250 ಕೋಟಿ ರುಪಾಯಿಗೆ ಹೆಚ್ಚಲಿದೆ ಎಂದು ಮುನಿಯಪ್ಪ ಹೇಳಿದರು.

ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ . ಸುಪ್ರಿಂಕೋರ್ಟ್‌ ಆದೇಶದ ಪ್ರಕಾರ ಪ್ರಸ್ತುತ ನಡೆಯುತ್ತಿರುವ ಗಣಿಗಾರಿಕೆ ಅವಧಿ ಮುಗಿದ ನಂತರ ಗಣಿಗಾರಿಕೆಯನ್ನು ನಿಲ್ಲಿಸಲಾಗುವುದು ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದರು.

ಬಾಲಂಗೋಚಿ : ಗಣಿಗಾರಿಕೆಯಿಂದ ಒದಗುವ ಆದಾಯವನ್ನು ರಾಜ್ಯ ಸರ್ಕಾರ ಮಕ್ಕಳ ಬೆಳಗಿನ ಬಿಸಿ ಉಪಾಹಾರ ಯೋಜನೆ ರೂಪಿಸಲು ಬಳಸಬಹುದು! ಆ ಯೋಜನೆಯನ್ನು ‘ಭೂಮಿಗೆ ಕನ್ನ -ಮಕ್ಕಳಿಗೆ ಅನ್ನ’ ಅಥವಾ ‘ತಿಂಡಿಗಾಗಿ ಗುಂಡಿ’ ಎಂದು ಹೆಸರಿಸಬಹುದಾ ?

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X