ವೀರಪ್ಪನ್ ಸಿಗೋಲ್ಲ , ಶರಣಾಗತಿ ಯತ್ನವೇ ಗತಿ- ಸಾಂಗ್ಲಿಯಾನಾ
ವೀರಪ್ಪನ್ ಸಿಗೋಲ್ಲ , ಶರಣಾಗತಿ ಯತ್ನವೇ ಗತಿ- ಸಾಂಗ್ಲಿಯಾನಾ
ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದಿದ ಸಾಂಗ್ಲಿಯಾನಾಗೆ ಸಂಘ ಸಂಸ್ಥೆಗಳಿಂದ ಸನ್ಮಾನ
ವೀರಪ್ಪನ್‌ನನ್ನು ಬಂಧಿಸಲು ಸರಕಾರ ಬಳಸುತ್ತಿರುವ ಪದ್ಧತಿಯಿಂದ ಪ್ರಯೋಜನವೇ ಇಲ್ಲ. ಹೀಗೆ ಇನ್ನು 15 ವರ್ಷಗಳ ಕಾಲ ಆತನನ್ನು ಹುಡುಕುತ್ತಿದ್ದರೂ ಆತ ಕೈಗೆ ಸಿಗುವುದಿಲ್ಲ ಎಂದ ಸಾಂಗ್ಲಿಯಾನಾ- ಮಲೆ ಮಹದೇಶ್ವರ ಬೆಟ್ಟದಲ್ಲಿ ದುರ್ಗಮ ಕಾಡಿನಿಂದಾಗುತ್ತಿರುವ ತೊಂದರೆ, ಬೇಹುಗಾರಿಕಾ ವೈಫಲ್ಯ ಮತ್ತು ಸ್ಥಳೀಯರ ಅಸಹಕಾರದಿಂದಾಗಿ ವೀರಪ್ಪನ್‌ನನ್ನು ಹಿಡಿಯುವುದು ಸಾಧ್ಯವಾಗುತ್ತಿಲ್ಲ ಎಂದರು.
ವೀರಪ್ಪನ್ ಬಗ್ಗೆ ಮಾಹಿತಿ ನೀಡುವವರೂ ಕೂಡ ಆತನಿಂದಲೇ ಹಣ ಪಡೆಯುತ್ತಿದ್ದಾರೆ. ಇತ್ತ ಪೊಲೀಸರಿಂದಲೂ ಹಣ ಪಡೆಯುತ್ತಿದ್ದಾರೆ. ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ವಿಶೇಷ ಕಾರ್ಯಪಡೆಯ ಬೇಹುಗಾರಿಕಾ ವೈಫಲ್ಯವೇ ವೀರಪ್ಪನ್ ಶಿಕಾರಿ ವಿಫಲತೆಗೆ ಕಾರಣ ಎಂದು ಸಾಂಗ್ಲಿಯಾನಾ ಸ್ಪಷ್ಟ ದನಿಯಲ್ಲಿ ಹೇಳಿದರು.
ಕಾರಾಗೃಹ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನಿವೃತ್ತಿ ಸಂದರ್ಭದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಾಂಗ್ಲಿಯಾನಾ ಮಾತನಾಡುತ್ತಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications