ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತುಂತುರು ನೀರಾವರಿಗೆ ಓಕೆ, ನೀರುಕಳ್ಳರ ಕುರಿತು ಟೀಕೆ’

By Staff
|
Google Oneindia Kannada News

‘ತುಂತುರು ನೀರಾವರಿಗೆ ಓಕೆ, ನೀರುಕಳ್ಳರ ಕುರಿತು ಟೀಕೆ’
ಕಾವೇರಿ ನದಿ ನೀರು ಬಳಕೆಯಲ್ಲಿ ರಾಜ್ಯಕ್ಕೆ ಅನ್ಯಾಯ- ಕೃಷ್ಣ

ಬೆಂಗಳೂರು : ತುಂತುರು ನೀರಾವರಿ ಬಳಸುವ ರಾಜ್ಯದ ಎಲ್ಲಾ ರೈತರಿಗೂ ಪ್ರತಿಶತ ನೂರರಷ್ಟು ಸಬ್ಸಿಡಿಯುಳ್ಳ ಯೋಜನೆಯನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸೋಮವಾರ ಪ್ರಕಟಿಸಿದರು.

ಹನಿ ನೀರಾವರಿ ಯೋಜನೆಯನ್ನು ಬಿಜಾಪುರ ಜಿಲ್ಲೆಯಲ್ಲಿ ಈಗಾಗಲೇ ಅನುಷ್ಠಾನಕ್ಕೆ ತರಲಾಗಿದ್ದು , ಈ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಕೃಷ್ಣ ಹೇಳಿದರು. ಸೋಮವಾರ (ಜೂನ್‌ 9) ಪ್ರಾರಂಭವಾದ ವಿಶ್ವ ಬೀಜ ಸಮ್ಮೇಳನ- 2003ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಶೇ.100 ಸಬ್ಸಿಡಿಯ ಹನಿ ನೀರಾವರಿ ಸೌಲಭ್ಯದ ಯೋಜನೆಯನ್ನು ಬಳಸಿಕೊಳ್ಳುವಂತೆ ರಾಜ್ಯದ ರೈತರಿಗೆ ಕರೆ ನೀಡಿದ ಕೃಷ್ಣ - ಕಾವೇರಿ ಜಲಾನಯನ ಪ್ರದೇಶದ ರೈತರಿಗಂತೂ ಹನಿ ನೀರಾವರಿ ಯೋಜನೆ ಅತ್ಯಗತ್ಯವಾದುದು ಎಂದರು.

ನೀರು ಬಳಕೆಯಲ್ಲಿ ತಾರತಮ್ಯ

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಣ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಗಡಿಯಾಚೆಯ ಪ್ರದೇಶದಲ್ಲಿ ಕಾವೇರಿ ನೀರು ಬಳಕೆ ನ್ಯಾಯಯುತವಾಗಿಲ್ಲ ಎಂದು ತಮಿಳುನಾಡಿನ ಆಸೆಬುರುಕತನವನ್ನು ಪರೋಕ್ಷವಾಗಿ ಟೀಕಿಸಿದರು.

ಹಲವು ದಶಕಗಳಿಂದ ಕಾವೇರಿ ನದಿ ನೀರಿನ ಬಳಕೆ ನ್ಯಾಯಯುತವಾಗಿಲ್ಲ . ಇದರಿಂದಾಗಿಯೇ ಕಹಿ ಭಾವನೆ ಹಾಗೂ ತಿಕ್ಕಾಟಗಳು ಸಂಭವಿಸುತ್ತಿವೆ ಎಂದು ಕೃಷ್ಣ ಅಭಿಪ್ರಾಯಪಟ್ಟರು.

ಮುಂಗಾರು ವಿಳಂಬ- ಕೃಷಿ ಮೇಲೆ ಪರಿಣಾಮವಿಲ್ಲ

ಮುಂಗಾರು ಮಳೆಯ ಒಂದು ವಾರಕಾಲದ ವಿಳಂಬದಿಂದ ದೇಶದ ಕೃಷಿ ಉತ್ಪನ್ನಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ರಾಜನಾಥ್‌ಸಿಂಗ್‌ ಹೇಳಿದರು. ವಿಶ್ವ ಬೀಜ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಚಿವ ರಾಜನಾಥ್‌- ಮುಂಗಾರು ವಿಳಂಬದ ಕಾರಣ ಕೃಷಿ ಉತ್ಪನ್ನಗಳ ನೀತಿಯನ್ನು ಕೇಂದ್ರ ಸರ್ಕಾರ ಬದಲಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X