ಪಾಣೆಮಂಗಳೂರು ಸೇತುವೆ ಸಂಚಾರಕ್ಕೆ ತೆರವು
ಪಾಣೆ ಮಂಗಳೂರು: ಹೊಸದಾಗಿ ನಿರ್ಮಿಸಲಾಗಿರುವ ನೇತ್ರಾವತಿ ಸೇತುವೆ ವಾಹನ ಸಂಚಾರಕ್ಕೆ ಕೊನೆಗೂ ಮುಕ್ತಗೊಂಡಿದೆ. ಪಾಣೆಮಂಗಳೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸೇತುವೆಯನ್ನು ಕೇಂದ್ರ ಸಾರಿಗೆ ಸಚಿವ ಬಿ. ಸಿ. ಖಂಡೂರಿ ಮೇ12ರ ಸೋಮವಾರ ಉದ್ಘಾಟಿಸಿದರು.
ಹಳೇ ಸೇತುವೆಯಲ್ಲಿ ಈಗಾಗಲೇ ಹಲವೆಡೆ ಬಿರುಕುಗಳು ಬಿಟ್ಟಿರುವುದರಿಂದ ಹಲವು ತಿಂಗಳುಗಳಿಂದ ಸಾರ್ವಜನಿಕರು ಹೊಸ ಸೇತುವೆಯ ಔಪಚಾರಿಕ ಉದ್ಘಾಟನೆಗಾಗಿ ಕಾಯುತ್ತಿದ್ದರು. ಅಲ್ಲದೆ ಹಳೇ ಸೇತುವೆ ಒನ್‌ವೇ ಆಗಿದ್ದರಿಂದ ಪಾಣೆ ಮಂಗಳೂರು ಬಳಿ ರಸ್ತೆ ಸಂಚಾರ ಆಗಾಗ್ಗೆ ಅಸ್ತವ್ಯಸ್ತಗೊಳ್ಳುತ್ತಿತ್ತು.
ಸೇತುವೆಯನ್ನು ಉದ್ಘಾಟಿಸಿದ ಖಂಡೂರಿ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಾಗಿ ಸರಕಾರ ಒಂದು ಲಕ್ಷ ಕೋಟಿ ರೂಪಾಯಿ ತೊಡಗಿಸುವುದಾಗಿ ಭರವಸೆ ನೀಡಿದರು. ಫೋರ್ ಲೇನ್ ( ನಾಲ್ಕು ವಾಹನಗಳು ಚಲಿಸಬಹುದಾದ) ರಾಷ್ಟ್ರೀಯ ಹೆದ್ದಾರಿಯ ಅಭಿವದ್ಧಿ ಪಡಿಸುವ ಯೋಜನೆ ಸರಕಾರಕ್ಕಿದೆ. ಈ ಯೋಜನೆಯಡಿ ದೇಶದ ಮುಖ್ಯ ಮೆಟ್ರೋ ಪಾಲಿಟನ್ ಸಿಟಿಗಳಿಗೆ ಈ ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕ ಕಲ್ಪಿಸುತ್ತವೆ ಎಂದು ಖಂಡೂರಿ ಹೇಳಿದರು.
ಭರವಸೆಗಳ ನಂತರ, ಪಾಣೆ ಮಂಗಳೂರು ಸೇತುವೆ ನಿರ್ಮಾಣ ಕಾರ್ಯ ಹಾಗೂ ಅದರ ಉದ್ಘಾಟನೆ ನಡೆಸುವುದು ತಡವಾಗಿರುವುದಕ್ಕೆ ಖಂಡೂರಿ ವಿಷಾದಿಸಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications