ರಾಹುಲ್ ದ್ರಾವಿಡ್‌ಗೆ ಕೂಡಿ ಬಂದ ಕಂಕಣ
‘ನಾನು ಮುಂದಿನ ತಿಂಗಳು ಮದುವೆಯಾಗುತ್ತಿದ್ದೇನೆ’
ಹಾಗಂತ ಭಾರತ ಕ್ರಿಕೆಟ್ ತಂಡದ ಬಂಡೆ ಎಂದೇ ಹೆಸರುವಾಸಿಯಾಗಿರುವ ರಾಹುಲ್ ದ್ರಾವಿಡ್ ಹೇಳುತ್ತಿದ್ದಂತೆ ದೆಹಲಿಯ ಡಜನ್ನುಗಟ್ಟಲೆ ಹುಡುಗಿಯರ ಮುಖ ಬಾಡಿ ಹೋದದ್ದು ನಿಜ. ಯುಗಾದಿ ದಿನ ದೆಹಲಿಯಲ್ಲಿ ರೀಬಾಕ್ ಸೂಪರ್‌ಸ್ಟೋರ್ ಉದ್ಘಾಟಿಸಲು ದ್ರಾವಿಡ್, ಮೊಹಮ್ಮದ್ ಕೈಫ್ ಹಾಗೂ ಕಪಿಲ್ ಸೇರಿದ್ದರು. ಆದರೆ, ಎಲ್ಲ ಸುದ್ದಿಗಾರರ ಹಾಗೂ ಅಭಿಮಾನಿಗಳ ದಂಡು ಸುತ್ತುವರೆದದ್ದು ದ್ರಾವಿಡ್‌ರನ್ನು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ಒಲ್ಲೆ ಎಂದ ದ್ರಾವಿಡ್ ಆಟೋಗ್ರಾಫ್ ಕೇಳಿಕೊಂಡು ನಿಂತ ಹುಡುಗಿಯರಿಗೂ ನೋ ಅಂದುಬಿಟ್ಟರು. ಆದರೆ, ಮಕ್ಕಳ ಮನಸ್ಸನ್ನು ಮಾತ್ರ ಅವರು ನೋಯಿಸಲಿಲ್ಲ. ಮಕ್ಕಳಿಗೆ ಅವರು ತಪ್ಪದೆ ಆಟೋಗ್ರಾಫ್ ಕೊಟ್ಟರು. ಬಯಸಿದ ಚಿಣ್ಣರೊಟ್ಟಿಗೆ ಕೆಮೆರಾಗೆ ಪೋಸ್ ಕೊಟ್ಟರು. ಮದುವೆ ಬಗ್ಗೆ ಚಿಣ್ಣರೇ ಪ್ರಶ್ನೆ ಎತ್ತಿದಾಗ, ತುಂಟ ನಗೆ ನಕ್ಕರು.
ಅಂದಹಾಗೆ, ಮೇ. 4ನೇ ತಾರೀಕು ಬೆಂಗಳೂರಲ್ಲಿ ದ್ರಾವಿಡ್ ಮದುವೆ. ಹುಡುಗಿ ನಾಗಪುರದ ವೈದ್ಯೆ, ಡಾ। ವಿಜೇತಾ ಪೆಂಡಾರ್ಕರ್. ಈಕೆ ನಿವೃತ್ತ ಐಎಎಫ್ ವಿಂಗ್ ಕಮಾಂಡರ್ ಎಸ್.ಪಿ.ಪೆಂಡಾರ್ಕರ್ ಮಗಳು. ಮದುವೆಯ ನಂತರ ಮೇ.10ನೇ ತಾರೀಕು ನಾಗಪುರದಲ್ಲಿ ರಿಸಪ್ಷನ್ನು ನಿಗದಿಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications