ದಾಂಡೇಲಿ ಹೋರಾಟಗಾರರಿಂದ ಕಾಳಿ ಬಚಾವೋ !
ಬೆಂಗಳೂರು : ಕಲುಷಿತಗೊಳ್ಳುತ್ತಿರುವ ಕಾಳೀ ನದಿಯನ್ನು ಉಳಿಸಲು ಏಪ್ರಿಲ್ 3ರಿಂದ ಅಧಿಕೃತವಾಗಿ ಚಳವಳಿ ಚುರುಕುಗೊಳಿಸಲು ದಾಂಡೇಲಿ ಹೋರಾಟಗಾರರು ನಿರ್ಧರಿಸಿದ್ದಾರೆ.
ಹೋರಾಟಗಾರರಲ್ಲಿ ಮುಂಚೂಣಿಯಲ್ಲಿರುವ ಪರಿಸರವಾದಿ ಪಾಂಡುರಂಗ ಹೆಗಡೆ ಇತ್ತೀಚೆಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ದಾಂಡೇಲಿ ಪೇಪರ್ ಉದ್ದಿಮೆಯ ತ್ಯಾಜ್ಯ ನೀರು ಕಾಳಿ ನದಿಗೆ ನೇರವಾಗಿ ಹರಿದು ಬರುತ್ತಿದೆ. ನೀರಲ್ಲಿ ನಿಧನಿಧಾನವಾಗಿ ವಿಷ ಸೇರುತ್ತಿದ್ದು, ಅದನ್ನು ಕುಡಿಯುವ ದನಕರುಗಳ ದೇಹಸ್ಥಿತಿಯಲ್ಲಿ ಏರುಪೇರಾಗುತ್ತಿದೆ. ಕಾಳಿ ನದಿಯ ದಂಡೆಯಲ್ಲಿರುವ ಎಷ್ಟೋ ಊರುಗಳ ಜಾನುವಾರುಗಳು ಕುಡಿಯಲು ಕಾಳಿ ನದಿ ನೀರೇ ಆಧಾರ. ಮತ್ತೊಂದು ಕಡೆ ಗಣಿಗಾರಿಕೆ ನಡೆಯುತ್ತಿದ್ದು, ನದಿಯಲ್ಲಿ ಹೂಳು ತುಂಬುತ್ತಿದೆ. ಕಾಳಿ ನದಿ ಸಾಕಷ್ಟು ಜನರ ಪಾಲಿನ ಜೀವನದಿ. ಆ ಕಾರಣಕ್ಕೇ ಜನ ಅಧಿಕ ಸಂಖ್ಯೆಯಲ್ಲಿ ಅದನ್ನು ಉಳಿಸುವ ಚಳವಳಿಗೆ ಸೇರುತ್ತಿದ್ದಾರೆ ಎಂದು ಪಾಂಡುರಂಗ ಹೆಗಡೆ ಹೇಳಿದರು.
ಹಿರಿಯ ಪರಿಸರವಾದಿ ಸುಂದರ ಲಾಲ್ ಬಹುಗುಣ, ರಾಜಕೀಯವಲ್ಲದ ಈ ಚಳವಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications