ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.22ಕ್ಕೆ ಮಂಗಳೂರಲ್ಲಿ ಕನಕ ಪೀಠ ಉದ್ಘಾಟನೆ

By Staff
|
Google Oneindia Kannada News

ಮಂಗಳೂರು : ಕೋಣಾಜೆಯ ಮಂಗಳ ಗಂಗೋತ್ರಿಯಲ್ಲಿ ಸರಕಾರದ ವತಿಯಿಂದ ನಿರ್ಮಾಣಗೊಂಡಿರುವ ಕನಕ ದಾಸ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭವು ಮಾರ್ಚ್‌ 22ರಂದು ನಡೆಯಲಿದೆ.

ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಕನಕದಾಸ ಅಧ್ಯಯನ ಪೀಠವನ್ನು ಉದ್ಘಾಟಿಸುವರು. ರಾಜ್ಯ ರೇಷ್ಮೆ ಮತ್ತು ಜವಳಿ ಸಚಿವ ಎಚ್‌. ಎಂ. ರೇವಣ್ಣ ಹಾಗೂ ವಿವಿಯ ಕುಲಪತಿ ಪ್ರೊ. ಬಿ. ಹನುಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು.

ಕನಕ ಪೀಠದ ಸ್ಥಾಪನಗೆ ಸರಕಾರವು 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಕನಕ ದಾಸರ ತತ್ವ, ಬರಹ ಮತ್ತು ಬೋಧನೆಯನ್ನು ಸಾರ್ವಜನಿಕರಲ್ಲಿ ಪ್ರಚಾರ ಪಡಿಸುವುದು, ಸಂಶೋಧನೆಗಳಿಗೆ ಬೆಂಬಲ ನೀಡುವುದು, ಕಾರ್ಯಾಗಾರ, ಉಪನ್ಯಾಸ ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ಪುಸ್ತಕ ಪ್ರಕಟನೆ, ಅನುವಾದಗಳನ್ನು ಪ್ರೋತ್ಸಾಹಿಸುವುದು ಈ ಅಧ್ಯಯನ ಪೀಠದ ಉದ್ದೇಶ ಎಂದು ವಿವಿಯ ಕುಲಸಚಿವ ಕೆ. ಸುಂದರ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X