ಪ್ರೇಂಜಿ ವಿಶ್ವದ 10ನೇ ಶಕ್ತಿಶಾಲಿ ಬಿಲಿಯನೇರ್‌

ನವದೆಹಲಿ : 5.9 ಶತಕೋಟಿ ಡಾಲರ್‌ ನಿವ್ವಳ ಆಸ್ತಿಯ ಒಡೆಯ, ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಜಗತ್ತಿನ ಅತ್ಯಂತ ಬಲಾಢ್ಯ ಬಿಲಿಯನೇರ್‌ಗಳ ಪೈಕಿ 10ನೆಯವರು.

ಫೋರ್ಬ್ಸ್‌ ಕಲೆಹಾಕಿರುವ ಈ ಪ್ರಭಾವಿ ಹಾಗೂ ಶಕ್ತಿ ಶಾಲಿ ಬಿಲಿಯನೇರ್‌ಗಳ ಯಾದಿಯಲ್ಲಿ ಮೊದಲಿಗ ಮೈಕ್ರೋಸಾಫ್ಟ್‌ ಅಧ್ಯಕ್ಷ ಬಿಲ್‌ಗೇಟ್ಸ್‌. ಈತ 40.7 ಶತಕೋಟಿ ಡಾಲರ್‌ ಆಸ್ತಿಯ ಒಡೆಯ. ಮೀಡಿಯಾ ಮ್ಯಾಗ್ನೆಟ್‌ ರುಪರ್ಟ್‌ ಮುರ್ಡೋಕ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಯಾದಿಯಲ್ಲಿನ ರ್ಯಾಂಕ್‌ಗೆ ಕೇವಲ ಆಸ್ತಿಯ ಪ್ರಮಾಣವಷ್ಟೇ ಮಾನದಂಡವಲ್ಲ. ಈ ಬಿಲಿಯನೇರ್‌ಗಳ ಬಲಾಢ್ಯ ರಾಜಕೀಯ ಸಂಪರ್ಕ, ಉದ್ದಿಮೆ- ವಹಿವಾಟಿನ ಗಾತ್ರ, ಜನಸೇವೆಯ ಧೋರಣೆ, ಮಾಧ್ಯಮಗಳು ಇವರ ಬಗ್ಗೆ ಏನೆನ್ನುತ್ತವೆ- ಇವನ್ನೆಲ್ಲಾ ಪರಿಶೀಲಿಸಿದ ನಂತರವೇ ರ್ಯಾಂಕ್‌ ನಿರ್ಧಾರ ಮಾಡಲಾಗಿದೆ.

ಆರ್ಥಿಕವಾಗಿ ಪ್ರೇಂಜಿಯಷ್ಟೇ ಸ್ಥಿತಿವಂತರಾದ ಇಟಾಲಿಯನ್‌ ಪ್ರಧಾನಿ ಸಿಲ್ವಿಯೋ ಬರ್ಲ್ಯುಸ್ಕೋನಿಗೆ 3ನೇ ರ್ಯಾಂಕ್‌ ಸಿಕ್ಕಿದೆ. ಏಷ್ಯಾ- ಆಸ್ಟ್ರೇಲಿಯಾ ವಲಯದ ವಿಭಾಗದ ಪಟ್ಟಿಯಲ್ಲಿನ ಪ್ರಭಾವೀ ಶ್ರೀಮಂತರ ಸಾಲಿನಲ್ಲಿ ಪ್ರೇಂಜಿಗೆ 45ನೇ ರ್ಯಾಂಕ್‌ ಸಿಕ್ಕಿದೆ. 2.8 ಶತಕೋಟಿ ಡಾಲರ್‌ ಆಸ್ತಿಯುಳ್ಳ ಮುಕೇಶ್‌ ಮತ್ತು ಅನಿಲ್‌ ಅಂಬಾನಿ 123ನೇ ರ್ಯಾಂಕ್‌ ಪಡೆದಿದ್ದಾರೆ.

ಯಾದಿಯಲ್ಲಿರುವ ಇನ್ನಿತರ ಭಾರತೀಯರೆಂದರೆ-
ಕುಮಾರಮಂಗಲಂ ಬಿರ್ಲಾ (158ನೇ ರ್ಯಾಂಕ್‌)
ಸ್ಟೀಲ್‌ ಬ್ಯಾರನ್‌ ಲಕ್ಷ್ಮಿ ಮಿಟ್ಟಾಲ್‌ (177ನೇ ರ್ಯಾಂಕ್‌)
ಪಲ್ಲಾಂಜಿ ಮಿಸ್ಟ್ರಿ (199ನೇ ರ್ಯಾಂಕ್‌).

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+