ಹರಿಹರ ತಾಲ್ಲೂಕಲ್ಲಿ 50 ಮಂದಿಗೆ ಕರಳುಬೇನೆ
ದಾವಣಗೆರೆ : ಹರಿಹರದ ಸರ್ಕಾರಿ ಆಸ್ಪತ್ರೆಯಾಂದರಲ್ಲೇ ಮಾರ್ಚ್ ತಿಂಗಳಲ್ಲಿ 50 ಕರಳುಬೇನೆ ಪೀಡಿತರು ಚಿಕಿತ್ಸೆ ಪಡೆದ ವರದಿ ಬಂದಿದೆ.
ಕಳೆದ ಮೂರ್ನಾಲ್ಕು ದಿನಗಳಲ್ಲಿ ತಾಲ್ಲೂಕಿನ ವಿವಿಧ ಹಳ್ಳಿಗಳ 15 ಮಂದಿ ಕರಳುಬೇನೆಯ ಕಾರಣ ಆಸ್ಪತ್ರೆಗೆ ಸೇರಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಮೂವರಿರುವುದು ಆತಂಕದ ವಿಷಯವಾಗಿದೆ. ರಸ್ತೆ ಬದಿಯಲ್ಲಿ ತೆರೆದಿಟ್ಟ ತಿನಿಸುಗಳನ್ನು ತಿನ್ನದೆ, ನೀರನ್ನು ಕುದಿಸಿ ಆರಿಸಿ ಕುಡಿಯುವುದನ್ನು ಕಡ್ಡಾಯವಾಗಿ ಪಾಲಿಸಿ ಎಂದು ಜನರಲ್ಲಿ ಸ್ಥಳೀಯ ಆಡಳಿತ ಜಾಗೃತಿ ಮೂಡಿಸಬೇಕು. ನೀರಿನ ಟ್ಯಾಂಕುಗಳನ್ನು ಶುಚಿಪಡಿಸಬೇಕು ಎಂದು ಆಸ್ಪತ್ರೆಯ ವೈದ್ಯ ಡಾ.ಬೆಂಡಿಗೇರಿ ಸಲಹೆ ಕೊಟ್ಟರು.
ಕರಳುಬೇನೆ ಪೀಡಿತರಿಗೆ ಚಿಕಿತ್ಸೆ ಕೊಡಲು ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಿಯ ದಾಸ್ತಾನು ಇದೆ. ಆದರೆ, ರೋಗ ಉಲ್ಬಣಿಸುವುದನ್ನು ತಡೆಗಟ್ಟಲು ಸ್ಥಳೀಯ ಆಡಳಿತ ಮತ್ತು ಜನ ಟೊಂಕ ಕಟ್ಟಬೇಕು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications