ವಿಶ್ವಕಪ್ ಕ್ರಿಕೆಟ್ : 2007ರ ಪಂದ್ಯಾವಳಿಗೆ ಅಮೆರಿಕ ?
ಲಂಡನ್ : ಬೇಸ್‌ಬಾಲ್ ಹಾಗೂ ರಗ್ಬಿ ಆಟಗಳು ಜನಪ್ರಿಯವಾಗಿರುವ ಅಮೆರಿಕದಲ್ಲಿ ಕ್ರಿಕೆಟ್ ನೆಲೆ ಕಂಡುಕೊಳ್ಳುವುದಾ ? 2007 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೆರಿಕ ಭಾಗವಹಿಸುತ್ತದಾ ?
ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ -
2007 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೆರಿಕ ಭಾಗವಹಿಸುವುದು ಮಾತ್ರವಲ್ಲ , ಪಂದ್ಯಾವಳಿಗೆ ಸಹ ಆತಿಥ್ಯವನ್ನು ವಹಿಸಿಕೊಳ್ಳುವ ನಿರೀಕ್ಷೆಯೂ ಇದೆ.
2007 ವಿಶ್ವಕಪ್ ಚಾಂಪಿಯನಷಿಪ್‌ನ ಸಹ ಆತಿಥೇಯರಾಗಿ ಅಮೆರಿಕಾದಲ್ಲಿ ಕೆಲವು ಪಂದ್ಯಗಳನ್ನು ವಹಿಸಿಕೊಡಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಆಸಕ್ತಿಯಿದ್ದು , ಮುಂದಿನ ಐಸಿಸಿ ಕಾರ್ಯಕಾರಿ ಸಭೆ ಈ ಕುರಿತು ಸರ್ವಾನುಮತದ ನಿರ್ಣಯಕ್ಕೆ ಬರುವ ಸಾಧ್ಯತೆಯಿದೆ.
ವಿಶ್ವದ ಅತಿದೊಡ್ಡ ಮಾರುಕಟ್ಟೆಯಾದ ಅಮೆರಿಕಯತ್ತ ಐಸಿಸಿ ಕಣ್ಣು ಬಿದ್ದಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.
ವೆಸ್ಟ್‌ಇಂಡೀಸ್ 2007 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿದ್ದು , ಕೆಲವು ಪಂದ್ಯಗಳನ್ನು ಅಮೆರಿಕಾಗೆ ಬಿಟ್ಟುಕೊಡುವ ಇರಾದೆ ಹೊಂದಿದೆ. ಮಿಯಾಮಿಯಲ್ಲಿ ವೆಸ್ಟಿಂಡೀಸರು ಭಾರೀ ಸಂಖ್ಯೆಯಲ್ಲಿದ್ದು , ಇಲ್ಲಿನ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications