ಬೇಸಿಗೆ ವಿಶೇಷ :ನಗರದಿಂದ 5 ಹೆಚ್ಚುವರಿ ರೈಲು

ಬೆಂಗಳೂರು: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿ ದಕ್ಷಿಣ ರೈಲ್ವೇಯು ನಗರದಿಂದ ಐದು ವಿಶೇಷ ರೈಲು ಸಂಚಾರವನ್ನು ಏಪ್ರಿಲ್‌ನಿಂದ ಆರಂಭಿಸಲಿದೆ.

ವಿಶೇಷ ರೈಲುಗಳು: ಬೆಂಗಳೂರು - ಕ್ವಿಲಾನ್‌(ವಾರಕ್ಕೆರಡು ಬಾರಿ), ಚೆನ್ನೈ- ಬೆಂಗಳೂರು ( ವಾರಕ್ಕೊಮ್ಮೆ), ಬೆಂಗಳೂರು- ದಾದರ್‌ (ವಾರಕ್ಕೊಮ್ಮೆ) ಬೆಂಗಳೂರು- ಮಧುರೈ (ವಾರಕ್ಕೊಮ್ಮೆ) ಮತ್ತು ಮೈಸೂರು- ಬೆಂಗಳೂರು( ಪ್ರತಿದಿನ). ವಿಶೇಷ ರೈಲುಗಳ ಸಂಚಾರ ಏಪ್ರಿಲ್‌ನಿಂದ ಜೂನ್‌ ವರೆಗೆ ಮುಂದುವರೆಯಲಿದೆ ಎಂದು ದಕ್ಷಿಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಏಪ್ರಿಲ್‌ 14ರಿಂದ ಆರಂಭವಾಗಲಿರುವ ಬೆಂಗಳೂರು- ಕ್ವಿಲಾನ್‌ ರೈಲು ಸೋಮವಾರ ಮತ್ತು ಬುಧವಾರ ಬೆಂಗಳೂರಿನಿಂದ ಹಾಗೂ ಕ್ವಿಲಾನ್‌ನಿಂದ ಮಂಗಳವಾರ ಮತ್ತು ಬುಧವಾರದಂದು ಹೊರಡಲಿದೆ. ಜೂನ್‌. 5ರವರೆಗೆ ಈ ಮಾರ್ಗದಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+