ಮಾರ್ಚ್ 7ರಿಂದ ಉಡುಪಿಯ ಹೆಬ್ರಿಯಲ್ಲಿ ಕೃಷಿ ಮೇಳ
ಉಡುಪಿ : ಕೃಷಿಕರಿಗೆ ಆಧುನಿಕ ಕೃಷಿ ತಂತ್ರಗಳ ಬಗ್ಗೆ ತಿಳಿಸಿಕೊಡುವ ಉಮೇದಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹೆಬ್ರಿಯಲ್ಲಿ 3 ದಿನಗಳ ಕೃಷಿ ಮೇಳ ಆಯೋಜಿಸಿದೆ.
ಮಾರ್ಚ್ 7ರಿಂದ 9ನೇತಾರೀಕಿನವರೆಗೆ ಮೇಳ ನಡೆಯಲಿದೆ. ಆಧುನಿಕ ಕೃಷಿ ಉಪಕರಣಗಳು, ಕೃಷಿ ಮಾಹಿತಿ ಕೇಂದ್ರಗಳು, ಸ್ಥಳದಲ್ಲೇ ಭೂಮಿಯ ಮಣ್ಣನ್ನು ಪರೀಕ್ಷಿಸುವಂಥಾ ಮೊಬೈಲ್ ಪ್ರಯೋಗಾಲಯ- ಇವುಗಳ ಬಗ್ಗೆ ಕೃಷಿಕರಿಗೆ ಮೇಳದಲ್ಲಿ ವಿವರ ದೊರೆಯಲಿದೆ ಎಂದು ಮೇಳದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಕಾರ್ಕಳ ಶಾಸಕ ಗೋಪಾಲ್ ಭಂಡಾರಿ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿನಿತ್ಯ ಮೇಳಕ್ಕೆ ಸುಮಾರು 25 ಸಾವಿರ ರೈತರು ಭೇಟಿ ಕೊಡಲಿದ್ದಾರೆ. ಆಧುನಿಕ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಳ ಜೊತೆಗೆ ರೈತರ ತೊಂದರೆಗಳನ್ನು ಮುಂದಿಟ್ಟುಕೊಂಡು ಚರ್ಚಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಕೃಷಿ ಕ್ಷೇತ್ರದ ಪರಿಣತರು ಜಲ ಕುಯ್ಲು, ಲಾಭದಾಯಕ ಭತ್ತದ ಕೃಷಿ, ಹೆಂಗಸರ ಕೃಷಿ ಚಟುವಟಿಕೆಗಳು, ಸಾವಯವ ಗೊಬ್ಬರ ಉತ್ಪಾದನೆ ಮೊದಲಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಹೆಸರಾಂತ ಸಮಾಜ ಚಳವಳಿಕಾರ ಅಣ್ಣಾ ಹಜಾರೆ ಮೇಳವನ್ನು ಉದ್ಘಾಟಿಸಲಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications