ಮಂದಿರ: ಪ್ರತಿ ತಾಲ್ಲೂಕಿನಿಂದ 2,000 ಮಂದಿ ದಿಲ್ಲಿಗೆ
ದಾವಣಗೆರೆ: ಅಯೋಧ್ಯೆಯ ವಿವಾದ ರಹಿತ ಭೂಮಿಯನ್ನು ರಾಮಜನ್ಮ ಭೂಮಿ ನ್ಯಾಸ್ ಮಂಚ್‌ಗೆ ಮಾರ್ಚ್ 25ರೊಳಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಪ್ರತಿ ತಾಲ್ಲೂಕಿನಿಂದ ಎರಡು ಸಾವಿರ ಮಂದಿ ದೆಹಲಿಗೆ ತೆರಳಲಿದ್ದಾರೆ ಎಂದು ವಿಹೆಚ್‌ಪಿಯ ರಾಷ್ಟ್ರೀಯ ನಾಯಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ವಿವಾದ ರಹಿತ ಭೂಮಿಯನ್ನು ಮಾರ್ಚ್ 25ರೊಳಗೆ ಹಸ್ತಾಂತರಿಸುವಂತೆ ಈಗಾಗಲೇ ಗಡುವು ನೀಡಲಾಗಿದೆ. ಒಂದುವೇಳೆ ಭೂಮಿ ಹಸ್ತಾಂತರಗೊಳ್ಳದೇ ಇದ್ದಲ್ಲಿ ಮಾರ್ಚ್ 25ರಿಂದ ದೆಹಲಿಯ ಸಂಸತ್ ಭವನದ ಮುಂದೆ ಧರಣಿ ನಡೆಸಲಾಗುವುದು. ಪ್ರತಿ ದಿನ 25 ಸಾವಿರ ಜನ ಧರಣಿಯಲ್ಲಿ ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮುತಾಲಿಕ್ ತಿಳಿಸಿದರು.
ಮಾರ್ಚ್ 6ರಂದು ಆಯೋಧ್ಯಾ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತೀರ್ಪು ವಿರುದ್ಧವಾಗಿ ಬಂದಲ್ಲಿ ವಿವಾದ ರಹಿತ ಜಾಗವನ್ನು ವಶಪಡಿಸಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಿಂದಲೂ 2 ಸಾವಿರ ಮಂದಿ ದೆಹಲಿಗೆ ಪ್ರಯಾಣಿಸಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಮುತಾಲಿಕ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications