ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5000ರು.ಗೆ. ಕಂಪ್ಯೂಟರ್‌ !

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

Rajesh Jainಬೆಂಗಳೂರು : ಒಂದು ಪೋರ್ಟಬಲ್‌ ಟಿವಿ ಬೆಲೆಗೆ ಕಂಪ್ಯೂಟರ್‌ ಸಿಗುತ್ತದಾ ಅಂತ ಕೇಳಿದರೆ, ಸ್ವಲ್ಪ ಇರಿ ಸ್ವಾಮಿ ನಾನು ಕೊಡ್ತೀನಿ ಅಂತಾರೆ ರಾಜೇಶ್‌ ಜೈನ್‌.

ಕೆಲವು ವರ್ಷಳ ಹಿಂದೆ ಇಂಡಿಯಾವರ್ಲ್ಡ್‌ ಡಾಟ್‌ ಕಾಂ ಎಂಬ ವೆಬ್‌ಸೈಟನ್ನು ಶತಕೋಟಿ ರುಪಾಯಿಗೂ ಹೆಚ್ಚು ಬೆಲೆಗೆ ಮಾರಿ ಸುದ್ದಿ ತಲೆಬರಹದಲ್ಲಿ ಸದ್ದು ಮಾಡಿದ್ದ ರಾಜೇಶ್‌ ಜೈನ್‌ ಶ್ರೀಸಾಮಾನ್ಯನಿಗೂ ಕಂಪ್ಯೂಟರ್‌ ಕೈಗೆಟುಕಬೇಕೆಂದು ಹಟತೊಟ್ಟು ಕೆಲಸ ಮಾಡುತ್ತಿದ್ದಾರೆ. ನೆಟ್‌ಕೋರ್‌ ಸೊಲ್ಯುಷನ್ಸ್‌ ಎಂಬ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರಾಜೇಶ್‌ ಕನಸಿಗೆ ಅರ್ಥವಿದೆಯಾ? ಬನ್ನಿ ಅವರನ್ನೇ ಕೇಳೋಣ...

ಇವತ್ತು ಕಂಪ್ಯೂಟರ್‌ ಶ್ರೀಮಂತರ ಮನೆಯ ವಸ್ತುವಾಗೇ ಉಳಿದಿದೆ. ಅದರಲ್ಲೂ ಭಾರತದಲ್ಲಿ 20 ಸಾವಿರ ರುಪಾಯಿಗೂ ಹೆಚ್ಚು ಬೆಲೆ ತೆತ್ತು ಕಂಪ್ಯೂಟರ್‌ ಖರೀದಿಸುವುದು ಮಧ್ಯಮ ವರ್ಗದವರಿಗೂ ಕಷ್ಟಸಾಧ್ಯ. ಅಮೆರಿಕಾದಲ್ಲಿ ಪ್ರತಿ ವರ್ಷ ಸುಮಾರು 2.5 ಕೋಟಿ ಕಂಪ್ಯೂಟರ್‌ಗಳು ಮೂಲೆಗೆ ಬೀಳುತ್ತವೆ. ಅರ್ಥಾತ್‌ ಆ ಜಾಗಕ್ಕೆ ಅಭಿವೃದ್ಧಿ ಹೊಂದಿದ ಹೊಸ ತಂತ್ರಜ್ಞಾನ ವಿನ್ಯಾಸದ ಕಂಪ್ಯೂಟರ್‌ಗಳು ಬಂದಿರುತ್ತವೆ. ಹಳೆಯ ಕಂಪ್ಯೂಟರುಗಳನ್ನು ಬಳಸಿಕೊಂಡು, ಅವಕ್ಕೇ ಹೊಸ ವಿನ್ಯಾಸ ಅಳವಡಿಸಿದರೆ ಆಗುವ ಖರ್ಚು ಸಾಕಷ್ಟು ಕಡಿಮೆಯಾಗುತ್ತದೆ. ಜೊತೆಗೆ ಗುಣ ಮಟ್ಟವನ್ನು ಕಾಯ್ದುಕೊಳ್ಳುವುದೂ ಇದರಿಂದ ಸಾಧ್ಯವಿದೆ.

thin client-thick server solution ಎಂಬ ತತ್ತ್ವದ ಮೇಲೆ ನೆಟ್‌ಕೋರ್‌ ಕೆಲಸ ಮಾಡುತ್ತಿದೆ. ಹಳೆಯ ಕಂಪ್ಯೂಟರ್‌ ಹಾರ್ಡ್‌ವೇರ್‌ಗಳನ್ನು ಬಳಸಿಕೊಂಡು ಹೊಸ ತಂತ್ರಾಂಶವನ್ನು ಬಳಸಿ ಗಿರಾಕಿಗಳಿಗೆ ಹೊಸ ತಂತ್ರಜ್ಞಾನದ ಕಂಪ್ಯೂಟರ್‌ ಕೊಡುವುದು ಈ ತತ್ತ್ವದ ಉದ್ದಿಶ್ಯ. ಒಂದು ಕಾರ್ಪೊರೇಟ್‌ ಜಗತ್ತಿಗೆ ಕಂಪ್ಯೂಟರ್‌ನಲ್ಲಿ ಏನೆಲ್ಲಾ ಅಗತ್ಯಗಳಿರುತ್ತವೋ ಅವೆಲ್ಲವನ್ನೂ 5 ಸಾವಿರ ರುಪಾಯಿ ಬೆಲೆಯ ಕಂಪ್ಯೂಟರ್‌ ಒಳಗೊಂಡಿರುತ್ತದೆ. ಜೊತೆಗೆ ಇದರ ನಿರ್ವಹಣಾ ವೆಚ್ಚ ತಿಂಗಳಿಗೆ ಅಬ್ಬಬ್ಬಾ ಅಂದರೆ 250 ರುಪಾಯಿ.

1999ರಲ್ಲಿ ಸತ್ಯಂ ಇನ್ಫೋವೇಗೆ ತಮ್ಮ ಕಂಪನಿಯನ್ನು ಕಂಡಾಪಟ್ಟೆ ದುಡ್ಡಿಗೆ ಬಿಕರಿ ಮಾಡಿದ್ದ ರಾಜೇಶ್‌ ಜೈನ್‌ ಈಗ ಮಧ್ಯಮ ವರ್ಗದತ್ತ ಮುಖ ಮಾಡಿದ್ದಾರೆ. ಈ ಹಾದಿಯಲ್ಲಿ ಅವರು ಯಶಸ್ವಿಯಾಗಲಿ. 5 ಸಾವಿರ ರುಪಾಯಿಗೆ ಕಂಪ್ಯೂಟರ್‌ ಸಿಗುತ್ತೆ ಅಂದರೆ ಯಾರಿಗೆ ತಾನೆ ಬೇಡ ಹೇಳಿ?

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X