‘ಭ್ರಷ್ಟಾಚಾರ ನಿರ್ಮೂಲನೆಗೆ ಪೊಲೀಸರು ವೇಸ್ಟು , ಧರ್ಮವೇ ಬೆಸ್ಟು’
ಬೆಂಗಳೂರು : ಧರ್ಮಾಚರಣೆಯಿಂದ ಭ್ರಷ್ಟಾಚಾರ ಹೋಗಲಾಡಿಸಬಹುದೇ ವಿನಃ ಪೊಲೀಸ್ ಅಥವಾ ನ್ಯಾಯಾಂಗ ವ್ಯವಸ್ಥೆಯಿಂದಲ್ಲ. ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡಿರುವ ಕನ್ನಡಿಗ ಹಾಗೂ ನ್ಯಾಯಮೂರ್ತಿ ರಾಮಾ ಜೋಯಿಸ್ ಆಡಿದ ಮಾತಿದು.
ಭಾರತಿ ವಿದ್ಯಾಭವನ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತಾಡುತ್ತಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಬಂಧಿತರಾಗಿದ್ದಾಗ, ಅವರ ಬಿಡುಗಡೆ ಕೋರಿ ನ್ಯಾಯಾಲಯದಲ್ಲಿ ವಾದಿಸಿದ ಕಾರಣ 12 ತಿಂಗಳ ಸೆರೆವಾಸ ಅನುಭವಿಸಿದೆ. ಅಂದು ನಾನು ಮಾಡಿದ ಕಾರ್ಯಕ್ಕೇ ಇವತ್ತು ರಾಜ್ಯಪಾಲ ಹುದ್ದೆಯ ಗೌರವ ಸಿಕ್ಕಿರುವುದು ಎಂದರು.
ದೇಶದ ಅಧಃಪತನವನ್ನು ಪೊಲೀಸ್ ಅಥವಾ ಕಾನೂನು ವ್ಯವಸ್ಥೆಯಿಂದ ನಿವಾರಿಸುವುದು ಸಾಧ್ಯವಿಲ್ಲ. ನಾಗರಿಕರಲ್ಲಿ ಧರ್ಮಾಚರಣೆ ಜಾರಿಗೆ ತಂದರೆ ಮಾತ್ರ ಇದು ಸಾಧ್ಯ ಎಂದು ಜೋಯಿಸ್ ಅಭಿಪ್ರಾಯ ಪಟ್ಟರು.
ಧರ್ಮಕ್ಕೆ ಬೆಲೆ ಕೊಟ್ಟು ಬಾಳುವವರಿಗೆ ಹಣ ಮತ್ತು ಅಧಿಕಾರ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ರಾಮಾ ಜೋಯಿಸರ ಜೀವನವೇ ಸಾಕ್ಷಿ ಂದು ಭಾರತೀಯ ವಿದ್ಯಾ ಭವನದ ಕಾರ್ಯಕಾರಿ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಶ್ಲಾಘಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications