ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಕಂಪೆನಿಯಿಂದ ಒಂದು ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ

By Staff
|
Google Oneindia Kannada News

ಬೆಂಗಳೂರು: ವರ್ಷದ ಮೊದಲ ತ್ರೆೃಮಾಸಿಕದಲ್ಲಿ ವಿಪ್ರೋ ತಂತ್ರಜ್ಞಾನ ಸಂಸ್ಥೆಯು ಒಂದು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.

ನೇಮಕ ಮಾಡಿಕೊಂಡಿರುವ ಅಭ್ಯರ್ಥಿಗಳಲ್ಲಿ ಶೇ 30 ರಷ್ಟು ಮಂದಿ ಈಗಷ್ಟೇ ಕಾಲೇಜು ಮುಗಿಸಿ ಹೊಬಂದವರು. ನೇಮಕಾತಿಯ ಬಗ್ಗೆ ಕಂಪೆನಿಯ ಯೋಜನೆಗಳು ಇನ್ನೂ ಮುಂದುವರೆದಿದೆ ಎಂದು ಬೆಂಗಳೂರಿನ ವಿಪ್ರೋದ ಬೆಂಗಳೂರು ಮುಖ್ಯ ಕಚೇರಿಯ ಮೂಲಗಳು ತಿಳಿಸಿವೆ.

ವಿಶ್ವ ಆರ್ಥಿಕತೆಯ ಹಿನ್ನೆಡೆಯಿಂದಾಗಿ ಮತ್ತು ಸೆಪ್ಟೆಂಬರ್‌ 11ರ ಘಟನೆಯ ನಂತರ ವಿಪ್ರೋದ ವ್ಯವಹಾರಗಳು ಪ್ರಗತಿಯ ದಾರಿಯನ್ನು ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಸಾಫ್ಟ್‌ವೇರ್‌ ಉದ್ಯಮವೂ ಚೇತರಿಸಿಕೊಳ್ಳುತ್ತಿದೆ. ಆದ್ದರಿಂದ ಈ ವರ್ಷದ ಮೊದಲ ತ್ರೆೃಮಾಸಿಕದಲ್ಲೇ ನೇಮಕಾತಿ ಸಾಧ್ಯವಾಗಿದೆ.

ಈ ನಡುವೆ ದೊಡ್ಡ ಮತ್ತು ಸಣ್ಣ ಪ್ರಮಾಣದ ಸಾಫ್ಟ್‌ವೇರ್‌ ಕಂಪೆನಿಗಳು ಇನ್ನಷ್ಟು ಐಟಿ ತಜ್ಞರ ನೇಮಕಾತಿಗೆ ಯತ್ನಿಸುತ್ತಿವೆ. ಕಳೆದ ತ್ರೆೃಮಾಸಿಕಕ್ಕೆ ಹೋಲಿಸಿದಲ್ಲಿ, ಈ ವರ್ಷಾರಂಭದಲ್ಲಿ ಹಲವು ಕಂಪೆನಿಗಳು ತುಸು ಚೇತರಿಸಿಕೊಳ್ಳುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉತ್ತಮ ದಿನಗಳು ಎದುರಾಗುವ ನಿರೀಕ್ಷೆಯಿದೆ.

ಚೀಫ್‌ ಎಕ್ಸಿಕ್ಯುಟಿವ್‌ ಆಗಿ ತಾಂಡವ ಮೂರ್ತಿ
ಕಾಂಪ್ಯಾಕ್‌ ಇಂಡಿಯಾದ ಗ್ರಾಹಕ ಸೇವಾ ಘಟಕದಲ್ಲಿ ಐದು ವರ್ಷಗಳ ಕಾಲ ನಿರ್ದೇಶಕರಾಗಿದ್ದ ತಾಂಡವ ಮೂರ್ತಿ ವಿಪ್ರೋದ ವೃತ್ತಿಪರ ಸೇವಾ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈವರೆಗೆ ಎಚ್‌.ಆರ್‌.ರಮೇಶ್‌ ಚಂದ್ರ ಅವರು ಈ ಗಾದಿಯಲ್ಲಿದ್ದರು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X