ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡು ಆಟ ಆಡು.. ರಾಜ್ಯದಲ್ಲಿ ಆನ್‌ಲೈನ್‌ ಲಾಟರಿಗೆ ಕೃಷ್ಣ ಕೃಪೆ !

By Staff
|
Google Oneindia Kannada News

ಅಂಗಡಿ ಮುಂಗಟ್ಟುಗಳು, ಸೈಬರ್‌ ಕೆಫೆ, ರೆಸ್ಟೋರೆಂಟ್‌, ವಾಣಿಜ್ಯ ಮಳಿಗೆ, ಸಿನಿಮಾ ಮಂದಿರ... ಹೀಗೆ ನೀವು ಎಡತಾಕುವ ಪ್ರತಿಯಾಂದು ಸ್ಥಳದಲ್ಲೂ ಸದ್ಯದಲ್ಲೇ ಆನ್‌ಲೈನ್‌ ಲಾಟರಿ ಗೂಡುಗಳು ಕಣ್ಣಿಗೆ ಬೀಳುವ ದಿನ ದೂರವಿಲ್ಲ . ಆನ್‌ಲೈನ್‌ ಲಾಟರಿಗೆ ಕರ್ನಾಟಕ ಸರ್ಕಾರವೇ ಸಮ್ಮತಿಯ ಮುದ್ರೆ ಒತ್ತಿದೆ.
ಇದು ಸಿಲಿಕಾನ್‌ ವ್ಯಾಲಿಯ ಸೃಷ್ಟಿಕರ್ತ ಹೈಟೆಕ್‌ ಕೃಷ್ಣ ದರ್ಬಾರು !

ರಾಜ್ಯದಲ್ಲಿ 5 ವರ್ಷಗಳ ಕಾಲ ಆನ್‌ಲೈನ್‌ ಲಾಟರಿ ನಡೆಸಲು ಸರ್ಕಾರದಿಂದ ಅನುಮತಿ ಪಡೆದಿರುವವರು- ಅಲ್ಟ್ರಾ ಎಂಟರ್‌ಟೈನ್‌ಮೆಂಟ್‌ ಪ್ರೆೃವೇಟ್‌ ಲಿಮಿಟೆಡ್‌. ಐದು ವರ್ಷಗಳ ನಂತರ ಮೂರು ವರ್ಷಗಳ ಅನುಮತಿ ವಿಸ್ತರಣೆಯ ಅವಕಾಶವೂ ಇದೆಯಂತೆ. ಎಸ್ಸೆಲ್‌ ಗ್ರೂಪ್‌ ನಿರ್ದೇಶಕ (ವಾಣಿಜ್ಯ-ಕಾನೂನು) ಎಂ.ಬಿ.ಝೈದಿ ಸುದ್ದಿ ಹೇಳಿಕೆಯ ಮೂಲಕ ಈ ವಿಷಯ ತಿಳಿಸಿದ್ದಾರೆ. ಅಂದಹಾಗೆ, ಅಲ್ಟ್ರಾ ಕಂಪನಿ ಎಸ್ಸೆಲ್‌ ಗ್ರೂಪ್‌ನ ಒಂದಂಗ.

ಪ್ರಸ್ತುತ ಬೆಂಗಳೂರಿನ ಮಧ್ಯಮ- ಕೆಳ ಮಧ್ಯಮ ವರ್ಗದವರನ್ನು ಸೆಳೆಯುತ್ತಿರುವ ಸಿಕ್ಕಿಂ ಸರ್ಕಾರದ ಕೃಪಾ ಪೋಷಿತ ಆನ್‌ಲೈನ್‌ ಲಾಟರಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ಒದಗಿಸಿರುವುದು ಇದೇ- ಅಲ್ಟ್ರಾ ಕಂಪನಿ ! ಈಗ ಕಂಪನಿ ತಾನೇ ಸ್ವತಃ ಲಾಟರಿ ನಡೆಸಲು ಮುಂದಾಗಿದೆ. ಅನುಮತಿ ಗಿಟ್ಟಿಸಿಕೊಳ್ಳುವ ಮೂಲಕ ಬಂಪರ್‌ ಲಾಟರಿಯನ್ನೂ ತನ್ನದಾಗಿಸಿಕೊಂಡಿದೆ.

ರಾಜ್ಯದಲ್ಲಿ ಆನ್‌ಲೈನ್‌ ಲಾಟರಿ ಸದ್ಯದಲ್ಲೇ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲೇ 300 ಕೋಟಿ ರುಪಾಯಿಗಳನ್ನು ಕಂಪನಿ ಬಂಡವಾಳವಾಗಿ ತೊಡಗಿಸಲಿದೆ. 2002 ವರ್ಷದ ಕೊನೆಯಾಳಗೆ ರಾಜ್ಯದಲ್ಲಿ 3 ಸಾವಿರ ಲಾಟರಿ ಘಟಕಗಳನ್ನು ಸ್ಥಾಪಿಸಲು ಕಂಪನಿ ಉದ್ದೇಶಿಸಿದೆ.
ಆಡು ಆಟ ಆಡು..!

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X