ಪೊಲೀಸ್‌ ಠಾಣೆಯೇ ಮದುವೆ ಮಂಟಪ, ಹೆತ್ತವರೇ ಅತಿಥಿಗಳು !

ಆತ ತಮಿಳು ಗೌಡ
ಆಕೆ ವಕ್ಕಲತಿ
ಒಲವೇ ಅವರ ಬದುಕು!

Marriages are made in Heavenಅಂತರ್ಜಾತಿ ವಿವಾಹ ಬಂಧನಕ್ಕೆ ಸಿಲುಕಿದ ಕಾರಣದಿಂದಾಗಿ ದಂಪತಿಗಳಿಬ್ಬರು ತಮ್ಮ ಬಂಧುಗಳ ಕೋಮುಜ್ವಾಲೆಗೆ ಭಸ್ಮವಾದ ಘಟನೆಯ ಬೆನ್ನಿಗೇ, ಆ ನೋವಿನ ಗಾಯಕ್ಕೆ ಮುಲಾಮು ಸವರುವಂಥ ಘಟನೆ ಬೆಂಗಳೂರಿನ ಕುಮಾರ ಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ತಮಿಳು ಗೌಡ ಸಮುದಾಯಕ್ಕೆ ಸೇರಿದ ಜೈಪಾಲ್‌ ಹಾಗೂ ವಕ್ಕಲಿಗ ಜಾತಿಯ ಮೀನಾ ಹಾರ ಬದಲಿಸಿಕೊಂಡಾಗ ಸಾಕ್ಷಿಯಾದ ಪೊಲೀಸರೆಲ್ಲ ಕೆಲಕಾಲ ‘ಮನುಷ್ಯ ಜಾತಿ ತಾನೊಂದೆ ವಲಂ’ ಅಂದುಕೊಂಡಿರಬಹುದು. ಎರಡೂ ಕುಟುಂಬಗಳು ಒಪ್ಪಿದ್ದರೆ ಬಂಧುಬಳಗದ ಸಮ್ಮುಖದಲ್ಲಿ ಜಗಮಗಿಸಬೇಕಿದ್ದ ಮದುವೆಯದು. ಅಂತರ್ಜಾತಿ ವಿವಾಹಕ್ಕೆ ಮನೆಯವರು ಮುಖ ತಿರುಗಿಸಿದಾಗ, ಓಡಿ ಬಂದ ಪ್ರೇಮಿಗಳ ಕೈ ಹಿಡಿದದ್ದು ರಂಗಶ್ರೀ ಕಲಾ ಸಂಸ್ಥೆ . ಪೊಲೀಸ್‌ ಠಾಣೆಯೇ ಕಲ್ಯಾಣ ಮಂಟಪ!

ಮದುವೆಯ ಮುಂದಾಳ್ತನ ವಹಿಸಿದ್ದ ಸರ್ಕಲ್‌ ಇನ್ಸ್‌ಪೆಕ್ಟರ್‌ ಗಚ್ಚಿನ್‌ ಗಟ್ಟಿ ಮತ್ತು ಚೆನ್ನಪ್ಪ - ಮದುವೆ ಸಮಾರಂಭಕ್ಕೆ ಸ್ಥಳೀಯ ಗಣ್ಯರನ್ನು ಜೊತೆಗೂಡಿಸಿದ್ದರು. ಪೊಲೀಸರ ಕೊರೆಗೆ ವಧೂವರರ ಕುಟುಂಬದವರೂ ಓಗೊಟ್ಟರೆನ್ನಿ . ಮದುವೆಗೆ ಬಂದರು, ಹರಸಿದರು. ನೆರೆದವರೊಂದಿಗೆ ತಾವೂ ಅತಿಥಿಗಳಾಗಿ ಊಟ ಮಾಡಿದರು.
ಒಲವಿನೊಂದಿಗೆ ಸಂಸಾರ ಹೂಡಿರುವ ನೂತನ ದಂಪತಿಗಳಿಗೆ

ನಿಮ್ಮ ಹರಕೆಯೂ ಇರಲಿ.
(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮದುವೆ, ಮರು ಮದುವೆ ಮತ್ತು ಬದುಕು

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+