ಕಾಕನಕೋಟೆ ಕಾಡಲ್ಲಿ ಬೀಡು ಬಿಟ್ಟಿದ್ದ 35 ಹುಲಿ ಶಿಕಾರಿಗಳ ಬಂಧನ
ಮೈಸೂರು : ‘ಜಾ ಟ್ರ್ಯಾಪ್’ ಎಂಬ ಭಯಾನಕ ತಂತ್ರ ಉಪಯೋಗಿಸಿ ಕಾಕನಕೋಟೆ ಕಾಡಿನಲ್ಲಿ ಹುಲಿಯಾಂದನ್ನು ಘಾಸಿಗೊಳಿಸಿದ್ದ ಮಧ್ಯಪ್ರದೇಶದ 35 ಜನರ ಶಿಕಾರಿಗಳ ತಂಡವೊಂದನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕಳೆದ ಒಂದು ವಾರದಿಂದ ಶಿಕಾರಿಗಳ ಪತ್ತೆಯಲ್ಲಿ ತೊಡಗಿದ್ದ ನಾಗರಹೊಳೆ ಅರಣ್ಯಾಧಿಕಾರಿಗಳೂ ಸೇರಿದ ಸುಮಾರು 90 ಮಂದಿಯ ಪಡೆ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಬಂಧಿತರ ಪೈಕಿ 15 ಮಹಿಳೆಯರಿದ್ದಾರೆ. ಇವರಲ್ಲಿ ಬಹುತೇಕರು ಸೆಟ್ಟಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಬಿಡಾರ ಹೂಡಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಯಲ್ಲಿ ಹುಣಸೂರು ಮತ್ತು ಎಚ್.ಡಿ.ಕೋಟೆ ಪೊಲೀಸರು ನೆರವಾಗಿದ್ದಾರೆ.
ನಾಗರಹೊಳೆಗೆ ಒಂದು ವಾರ ಪ್ರವೇಶವಿಲ್ಲ : ಹುಲಿ ಶಿಕಾರಿ ತಂಡದ ಇನ್ನೂ 25 ಮಂದಿಯ ತಲಾಷು ನಡೆದಿದ್ದು, ಅದಕ್ಕೆ ಅನುಕೂಲವಾಗಲೆಂಬ ಕಾರಣಕ್ಕೆ ಇನ್ನೊಂದು ವಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಶಿಕಾರಿಗಳ ವಿಫಲ ಯತ್ನದಿಂದ ಗಾಯಗೊಂಡಿರುವ ಹುಲಿ ಮೈಸೂರು ಮೃಗಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications