ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ವಿಜ್ಞಾನಿ ಅಬುಲ್‌ಕಲಮ್‌

By Staff
|
Google Oneindia Kannada News

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ಸಹಮತದ ಅಭ್ಯರ್ಥಿಯಾಗಿ ಖ್ಯಾತ ಪರಮಾಣು ವಿಜ್ಞಾನಿ ಡಾ. ಎಪಿಜೆ ಅಬುಲ್‌ ಕಲಮ್‌ ಅವರನ್ನು ಎನ್‌ಡಿಎ ಶಿಫಾರಸು ಮಾಡಿದೆ.

ಸೋಮವಾರ ರಾತ್ರಿ ನಡೆದ ಎನ್‌ಡಿಎ ಸಭೆಯಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಕಲಮ್‌ ಅವರ ಹೆಸರನ್ನು ಸೂಚಿಸಿದ ಪ್ರಧಾನಿ ವಾಜಪೇಯಿ, ಎಲ್ಲ ರಾಜಕೀಯ ಪಕ್ಷಗಳ ಬೆಂಬಲವನ್ನು ತಾವು ನಿರೀಕ್ಷಿಸುತ್ತಿರುವುದಾಗಿ ಹೇಳಿದರು. ಆಡಳಿತ ಪಕ್ಷದ ಈ ಶಿಫಾರಸಿನ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್‌ ಪಕ್ಷ ಒಂದು ದಿನದ ಕಾಲಾವಕಾಶ ಕೇಳಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ತಿಳಿಸಿದ್ದಾರೆ.

ಅಬುಲ್‌ ಕಲಮ್‌ ಅವರ ಹೆಸರನ್ನು ಸೂಚಿಸುವುದಕ್ಕೆ ಮುಂಚಿತವಾಗಿ ಈ ಬಗ್ಗೆ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ಬಿಎಸ್‌ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತಿತರರೊಡನೆ ವಾಜಪೇಯಿ ಚರ್ಚಿಸಿರುವುದಾಗಿಯೂ ತಿಳಿದುಬಂದಿದೆ.

12 ನೇ ರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಹೆಸರನ್ನು ಸೂಚಿಸಿರುವ ಬಗ್ಗೆ ಡಾ. ಎಪಿಜೆ ಅಬುಲ್‌ ಕಲಮ್‌ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ರಾಮೇಶ್ವರಂ ದ್ವೀಪದಲ್ಲಿ ದೋಣಿ ತಯಾರಿಸುವ ಕುಟುಂಬವೊಂದರಲ್ಲಿ ಜನಿಸಿದ ಅವುಳ್‌ ಪಕೀರ್‌ ಜೈನುಲಾಭುದ್ದೀನ್‌ ಅಬುಲ್‌ ಕಲಂ ಭಾರತ ರತ್ನ ಪುರಸ್ಕೃತರು.

ಅಬುಲ್‌ಕಲಮ್‌ ರಾಷ್ಪ್ರಪತಿ ಹುದ್ದೆಗೆ ಅರ್ಹರೇ ?

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಕಲಮ್‌ ಆಗಮನದ ಕಾತರದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಾಯನ್ಸ್‌
ಚಂದ್ರನಲ್ಲಿಗೆ ಉಪಗ್ರಹ .. ಕನಸು, ಕನಸು...ಕನಸಿನಿಂದ ನನಸು’

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X