ಏಪ್ರಿಲ್‌ 15ರಿಂದ ಬಂಡೀಪುರ ನ್ಯಾಷನಲ್‌ ಪಾರ್ಕ್‌ ಬಾಗಿಲು ತೆರೆಯಲಿದೆ

ಬೆಂಗಳೂರು : ಕಳೆದ ಒಂದೆರಡು ತಿಂಗಳಿಂದ ಕಾಳ್ಗಿಚ್ಚಿನ ಆತಂಕದ ಕಾರಣ ಮುಚ್ಚಲಾಗಿದ್ದ ಬಂಡಿಪುರ ಅರಣ್ಯದ ಬಾಗಿಲು ಏಪ್ರಿಲ್‌ 15ರಿಂದ ತೆರವಾಗಲಿದೆ.

ಮೈಸೂರು ಯೋಜನಾ ನಿರ್ದೇಶಕರು ಗುರುವಾರ ಈ ವಿಷಯ ತಿಳಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮಡಿಕೇರಿ ಜಿಲ್ಲೆಯ ಕಾಡಲ್ಲೂ ಕಾಳ್ಗಿಚ್ಚು ಹತ್ತಿಕೊಂಡಿತ್ತು. ಬೇಸಗೆಯಲ್ಲಿ ಕಾಳ್ಗಿಚ್ಚಿನ ಆತಂಕ ಪ್ರತಿವರ್ಷವೂ ಇದ್ದೇ ಇರುತ್ತದೆ. ಆದರೆ ರಜೆ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರಿಗೆ ನಿರಾಸೆ ಮಾಡಲಾಗದು. ಅರಣ್ಯ ಇಲಾಖೆ ಕಾಳ್ಗಿಚ್ಚಿನ ಬಗ್ಗೆ ತೀವ್ರ ನಿಗಾ ವಹಿಸಿದೆ. ಸದ್ಯಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನ ಪೂರ್ಣ ಪ್ರಮಾಣದಲ್ಲಿ ಸುರಕ್ಷಿತ. ಯುಗಾದಿ ಹಬ್ಬದ ನಂತರ ಜನ ಇಲ್ಲಿಗೆ ಪ್ರವಾಸಕ್ಕೆ ಬರಬಹುದು. ಇಲ್ಲಿನ ಅತಿಥಿ ಗೃಹದಲ್ಲಿ ತಂಗಲು ವ್ಯವಸ್ಥೆಯೂ ಇರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+