ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯ ವಿವಾದಿತ ಪ್ರದೇಶದ ಸಮೀಪ ಪೂಜೆ ಕೂಡದು- ಕೋರ್ಟ್‌

By Staff
|
Google Oneindia Kannada News

ನವದೆಹಲಿ : ಅಯೋಧ್ಯೆಯ ವಿವಾದಿತ ಪ್ರದೇಶದ ಬಳಿಯಿರುವ ಜಾಗದಲ್ಲಿ ಯಾವುದೇ ಪೂಜಾ ಕಾರ್ಯಗಳನ್ನು ನಡೆಸಲು ಸುಪ್ರಿಂಕೋರ್ಟ್‌ ಅನುಮತಿಯನ್ನು ನಿರಾಕರಿಸಿದೆ.

ಮೂರು ಮಂದಿ ನ್ಯಾಯಮೂರ್ತಿಗಳ ಪೀಠ ಬುಧವಾರ ಈ ಮಹತ್ವದ ತೀರ್ಪು ನೀಡಿದ್ದು, ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಯಾವುದೇ ಕಾರ್ಯ ಚಟುವಟಿಕೆ ಅಥವಾ ಪೂಜಾ ಕಾರ್ಯಗಳನ್ನು ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಮಚಂದ್ರಾಪುರಂ ಹಳ್ಳಿಯ ಪ್ಲಾಟ್‌ ನಂ.159/160ಗೆ ಬರುವ ಸರ್ಕಾರದ ಅಧೀನದಲ್ಲಿರುವ 67.73 ಎಕರೆ ಪ್ರದೇಶದಲ್ಲಿ , ಯಾರಿಂದಲೂ, ಶಿಲಾ ಪೂಜೆ, ಶಿಲಾ ದಾನ ಮತ್ತು ಭೂಮಿ ಪೂಜೆ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಗಳನ್ನು ನಡೆಸಲು ಮುಂದಿನ ಕೋರ್ಟ್‌ ತೀರ್ಪು ಬರುವವರೆಗೆ ಅವಕಾಶ ನೀಡಬಾರದು ಎಂದು ಕೋರ್ಟ್‌ ನಿರ್ದೇಶಿಸಿದೆ.

ಕೋರ್ಟ್‌ ತೀರ್ಪನ್ನು ಪರಿಶೀಲಿಸುತ್ತಿರುವುದಾಗಿ ವಿಶ್ವ ಹಿಂದೂ ಪರಿಷತ್‌ ಹೇಳಿದೆ. ಈ ಮುನ್ನ ಕೇಂದ್ರ ಸರಕಾರವು ಅಯೋಧ್ಯೆಯಲ್ಲಿನ ವಿವಾದ ರಹಿತ ಜಾಗದಲ್ಲಿ ಸಾಂಕೇತಿಕ ಭೂಮಿ ಪೂಜೆ ಮಾಡಲು ತನ್ನ ಅಡ್ಡಿಯಿಲ್ಲ ಎಂದು ಸುಪ್ರಿಂ ಕೋರ್ಟ್‌ಗೆ ಹೇಳಿಕೆ ನೀಡಿತ್ತು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X