ಹಾರುತಿದೆ ನೋಡು ನಮ್ಮ ಬಾವುಟ : ಆನ್‌ಲೈನ್‌ನಲ್ಲಿ ರಾಷ್ಟ್ರಧ್ವಜ ಮಾರಾಟ

ಇನ್ಫೋ ಇನ್‌ಸೈಟ್‌

National Flagಕೇಸರಿ ಬಿಳಿ ಹಸಿರು, ನಡುವೆ ಶಾಂತಿ ಚಕ್ರವು..
- ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ನಿಮ್ಮ ರಾಷ್ಟ್ರಪ್ರೇಮ ಅಭಿವ್ಯಕ್ತಿಗೊಂದು ಅವಕಾಶ ಕಂಡುಕೊಳ್ಳಬೇಕೆ? ಇನ್ನೇಕೆ ತಡ ; ರಾಷ್ಟ್ರಧ್ವಜವೀಗ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯ. ISO 9001 ಮಾನ್ಯತೆ ಪಡೆದ ಭಾರತದ ಮೊಟ್ಟ ಮೊದಲ ವೆಬ್‌ಬಳಗ ಮೂಲಕ ರಾಷ್ಟ್ರಧ್ವಜ ಖರೀದಿಗೆ ಲಭ್ಯ.

ರಾಷ್ಟ್ರಧ್ವಜ ತಯಾರಿಕೆಯಲ್ಲಿ ಹೆಸರುಗಳಿಸಿರುವ ಧಾರವಾಡ ತಾಲ್ಲೂಕಿನ ಗರಗ ಕ್ಷೇತ್ರೀಯ ಖಾದಿ ಸೇವಾ ಸಂಘದ ರಾಷ್ಟ್ರಧ್ವಜ ಮೂಲಕ ಆನ್‌ಲೈನ್‌ ಮಾರುಕಟ್ಟೆ ಪ್ರವೇಶಿಸಿದೆ. ಹುಬ್ಬಳ್ಳಿಯ ವಚನ ವೆಂಚರ್ಸ್‌ ಸಂಸ್ಥೆಯು ಈ ಮಾರಾಟ ವ್ಯವಸ್ಥೆಯನ್ನು ಮಾಡಿದೆ. ಇದರಿಂದಾಗಿ ವಿಶ್ವದ ಯಾವುದೇ ಮೂಲೆಯಲ್ಲಿ ನೆಲೆಸಿರುವ ಭಾರತೀಯ ರಾಷ್ಟ್ರಧ್ವಜವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಐಎಸ್‌ಐ ಗುಣಮಟ್ಟದ ಮುದ್ರೆಯಿರುವ ಹಾಗೂ ಬಿಐಎಸ್‌ ಅನುಮೋದಿಸಿರುವ ಭಾರತದ ಏಕೈಕ ಖಾದಿ ಬಟ್ಟೆಯನ್ನು ಬೆಂಗೇರಿ ಕರ್ನಾಟಕ ಖಾದಿ ಫೆಡರೇಷನ್‌ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ರಾಷ್ಟ್ರಧ್ವಜಗಳನ್ನು ಕೊಳ್ಳುವುದು, ರಾಷ್ಟ್ರಪ್ರೇಮದ ಸಂಕೇತ ಮಾತ್ರವಲ್ಲ - ಖಾದಿ ಗ್ರಾಮೋದ್ಯಕ್ಕೂ ಇದರಿಂದ ಪ್ರೋತ್ಸಾಹ ದೊರಕಿದಂತಾಗುತ್ತದೆ. ಖಾದಿ- ಗಾಂಧಿ ಮಹಾತ್ಮನ ಕನಸು. ಸ್ವಾತಂತ್ರ್ಯ ಚಳವಳಿಯ ಸ್ಫೂರ್ತಿ.

ಪ್ರತಿ ಮನೆ, ಅಂಗಡಿ ಹಾಗೂ ಕಚೇರಿಗಳಿಗೆ ರಾಷ್ಟ್ರಧ್ವಜ ತಲುಪಿಸುವ ಗುರಿ ಹೊಂದಿರುವ ವಚನ ವೆಂಚರ್ಸ್‌, ಗರಗ ಸೇವಾ ಸಂಘದ ಉತ್ಪನ್ನಗಳಿಗೆ ಆನ್‌ಲೈನ್‌ ಮಾರುಕಟ್ಟೆ ಕಲ್ಪಿಸಲು ಹಾಗೂ ಸಿದ್ಧ ಖಾದಿ ಬಟ್ಟೆಗಳ ಮಾರಾಟಕ್ಕೆ ವಿವಿಧೆಡೆಗಳಲ್ಲಿ 250 ಕ್ಕೂ ಹೆಚ್ಚು ಪ್ರಾಂಚೈಸಿ ಶೋರೂಂಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.

ರಾಷ್ಟ್ರಧ್ವಜಗಳನ್ನು ಆನ್‌ಲೈನ್‌ ಮಾರುಕಟ್ಟೆ ವ್ಯಾಪ್ತಿಗೆ ತರುವ ಯೋಜನೆ ನೂರಾರು ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಿದೆ ಹಾಗೂ ಖಾದಿ ಉದ್ಯಮಕ್ಕೆ ಉತ್ತೇಜನ ನೀಡಲಿದೆ. ಉಳಿದಿರುವುದು ನೀವು ರಾಷ್ಟ್ರಧ್ವಜ ಕೊಳ್ಳುವುದು ಮಾತ್ರ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-
ಇ-ಮೇಲ್‌ : [email protected]
ದೂರವಾಣಿ : 9844182140

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+