ಪೂರಿ ಹಿಂದೂ ದೇವಾಲಯದಲ್ಲಿ ಹಿಂದೂ ಶ್ಲೋಕದ ನಡುವೆ ಮುಸ್ಲಿಂ ಮದುವೆ !
ಗುಜರಾತಿನಲ್ಲಿ ಕೋಮು ದಳ್ಳುರಿ. ಪೂರಿಯ ಹಿಂದೂ ದೇವಾಲಯದಲ್ಲಿ ಮುಸ್ಲಿಂ ಮದುವೆಯಾಂದರ ಸಿರಿ!
ರಾಮ ಹುಟ್ಟಿದ ಅಯೋಧ್ಯೆಯಲ್ಲಿ ಆತನ ದೇವಾಲಯ ಕಟ್ಟಲು ಆತಂಕದ ನಡುವೆಯೂ ಹಪಹಪ. ಪೂರಿಯಲ್ಲಿ ತಣ್ಣಗೆ ಒಂದು ಮುಸ್ಲಿಂ ಮದುವೆ ನಡೆದದ್ದು ಇವರ್ಯಾರಿಗೂ ಪಾಠವಾಗಲೇ ಇಲ್ಲ, ಪಾಪ! ಶೇಕ್ ಬದ್ರುದ್ದೀನ್ ಪುತ್ರ ಆಜಾದ್, ರಹೀಮತುಲ್ಲಾ ಪುತ್ರಿ ನಸೀಮಳ ಕೈ ಹಿಡಿದ ಪರಿಯೇ ಒಂದು ಸೊಗಸು. ಅಲ್ಲಿ ಮದುವೆಯ ಭೋಜನ ಉಂಡವರಲ್ಲಿ ಹಿಂದೂ, ಮುಸ್ಲಿಂ, ಕ್ರೆೃಸ್ತ, ಸಿಖ್ಖರೆಲ್ಲರೂ ಇದ್ದರು. ಮದುವೆಯೂಟವನ್ನು ಎಲ್ಲರೂ ಸೇರಿ ಕರೆದದ್ದು ಭಗವಂತನ ಪ್ರಸಾದ; ಆ ಭಗವಂತ ಎಲ್ಲರಿಗೂ ಒಂದೇ! ಮದುವೆಯಲ್ಲಿ ಹಿಂದೂ ಶ್ಲೋಕಗಳೂ ಕೇಳಿಬಂದವು.
ಮದುವೆಯ ಮಮತೆಯ ಕರೆಯೋಲೆಯೂ ಭಿನ್ನ. ಅದರಲ್ಲಿ ತಲೆಬರಹದಂತೆ ಕಾಣುತ್ತಿದ್ದುದು ‘ಓಂ ಪ್ರಜಾಪತೆಯೇ ನಮಃ’. ಮದುವೆ ನಡೆದದ್ದು ಬಾಬಾ ಅಖಂಡಲಮಣಿ ದೇವಾಲಯದಲ್ಲಿ. ನೆರೆದಿದ್ದ 500 ಜನ ಜಾತ್ಯತೀತತೆಗೆ ಹಿಡಿದ ಕನ್ನಡಿ. ಮದುವೆಯಲ್ಲಿ ಹಿರಿಹಿರಿ ಹಿಗ್ಗುತ್ತಾ ಅನನ್ಯ ಕ್ಷಣಗಳನ್ನು ಅನುಭವಿಸುತ್ತಿದ್ದ ಮುಸ್ಲಿಂ ಬಂಧು ಹೇಳಿದ ಮಾತಿದು- ಸಾಲಾಬೇಗ ಒಬ್ಬ ಮುಸ್ಲಿಂ. ಆತ ಜಗನ್ನಾಥ ದೇವರ ಪರಮ ಭಕ್ತ. ಮುಸ್ಲಿಂ ಮದುವೆಯಲ್ಲಿ ಹಿಂದೂ ಶ್ಲೋಕಗಳು ಮೊಳಗಿದರೆ ತಪ್ಪೇನು?
ಮದುವೆಯ ಗಂಡು ಹಿಂದೂ ಶ್ಲೋಕಗಳನ್ನು ಕೇಳಿ ಮಂತ್ರ ಮುಗ್ಧನಾಗಿದ್ದ. ಮದುವೆ ಮಂಟಪದಲ್ಲೇ ಆತ ಗಟ್ಟಿಯಾಗಿ ಹೇಳಿದ್ದು- ‘ಮುಸ್ಲಿಂ ಅಂತ ನನ್ನನ್ನು ತೋರಿಕೊಳ್ಳುವುದು ಇಷ್ಟವಿಲ್ಲ. ನಾನು ಒಬ್ಬ ಮನುಷ್ಯ ಅನ್ನುವುದೇ ಹೆಮ್ಮೆ’ !
ಟಿಪ್ಪೂ ಸುಲ್ತಾನ್ ಕೂಡ ಶ್ರೀರಂಗಪಟ್ಟಣದ ರಂಗನಾಥನ ಭಕ್ತನಾಗಿದ್ದ ಅನ್ನುವುದೂ ನಮಗೆ ಗೊತ್ತು. ಕೋಮು ಗಲಭೆ ಎಬ್ಬಿಸುವ ಮನಗಳಿಗೆ ಇದು ಮುಟ್ಟಬೇಕಲ್ಲ ?
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications