ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಕಳ್ಳರಿಗೆ ಭಾರಿದಂಡ, ಜೈಲು ಶಿಕ್ಷೆ : ಏ.10ರಿಂದ ಹೊಸ ಕಾನೂನು ಜಾರಿ

By Staff
|
Google Oneindia Kannada News

ಬೆಂಗಳೂರು : ವಿದ್ಯುತ್‌ ಕಳವು ಮಾಡುವವರಿಗೆ ಕನಿಷ್ಠ 3 ತಿಂಗಳಿನಿಂದ ಗರಿಷ್ಠ 5 ವರ್ಷದವರೆಗೆ ಹಾಗೂ 5ರಿಂದ 50 ಸಾವಿರದವರೆಗೂ ದಂಡ ವಿಧಿಸುವ ಕಠಿಣ ಕಾನೂನು ಕ್ರಮಗಳನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಏಪ್ರಿಲ್‌ 10ರಿಂದ ಅನುಷ್ಠಾನಕ್ಕೆ ತರಲಿದೆ. ಈ ವಿಷಯವನ್ನು ಪ್ರಸರಣ ನಿಗಮದ ಅಧ್ಯಕ್ಷ ವಿ.ಬಿ. ಬಾಳಿಗಾರ್‌ ತಿಳಿಸಿದ್ದಾರೆ.

ವಿದ್ಯುತ್‌ ಕಳವು ಒಂದು ಗಂಭೀರ ಅಪರಾಧ. ಏಪ್ರಿಲ್‌ ಹತ್ತರಿಂದ ಜಾರಿಗೆ ಬರುತ್ತಿರುವ ಹೊಸ ಕಾನೂನಿನ ರೀತ್ಯ ವಿದ್ಯುತ್‌ ಕಳ್ಳತನ ಮಾಡುವವರು ಸಿಕ್ಕಿಬಿದ್ದರೆ ಅವರು ಹೈಕೋರ್ಟ್‌ ಅಥವಾ ವಿಶೇಷ ನ್ಯಾಯಾಲಯದಲ್ಲಿ ಮಾತ್ರ ಜಾಮೀನು ಪಡೆಯಲು ಸಾಧ್ಯ. ವಿಶೇಷ ನ್ಯಾಯಾಲಯವೇ ವಿದ್ಯುತ್‌ ಕಳುವು ಪ್ರಕರಣಗಳ ವಿಚಾರಣೆ ನಡೆಸಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುತ್ತದೆ ಎಂದು ಅವರು ಹೇಳಿದರು. ವಿದ್ಯುತ್‌ ಕಳವಿಗೆ ಪ್ರೋತ್ಸಾಹ ಅಥವಾ ಕುಮ್ಮಕ್ಕು ನೀಡುವವರಿಗೂ ಶಿಕ್ಷೆ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದೂ ತಿಳಿಸಿದರು.

4 ವಿದ್ಯುತ್‌ ವಿತರಣಾ ಸಂಸ್ಥೆ : ವಿದ್ಯುತ್‌ ವಿತರಣಾ ಕ್ಷೇತ್ರ ಬಲಪಡಿಸುವ ಸಲುವಾಗಿ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್‌ ಪೂರೈಸಲು ಕ್ರಮಕೈಗೊಳ್ಳಲಾಗಿದೆ. 2002-03ರ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ನಾಲ್ಕು ವಿದ್ಯುತ್‌ ವಿತರಣ ನಿಗಮಗಳು ಕಾರ್ಯಾರಂಭ ಮಾಡಲಿವೆ ಎಂದು ಅವರು ಹೇಳಿದರು.

ರಾಜ್ಯದ ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಮತ್ತು ಗುಲ್ಬರ್ಗಾಗಳಲ್ಲಿ ವಿದ್ಯುತ್‌ ವಿತರಣಾ ಸಂಸ್ಥೆಗಳು ಅಸ್ತಿತ್ವಕ್ಕೆ ಬರಲಿವೆ. ಇವು ವಿದ್ಯುತ್‌ ಸೋರಿಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಿವೆ. ವಿದ್ಯುತ್‌ ಪ್ರಸರಣ ನಿಗಮದ ವಿಕೇಂದ್ರೀಕರಣದಿಂದ ಸುಧಾರಣೆ ಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಬಾಳಿಗಾರ್‌ ತಿಳಿಸಿದರು.

(ಇನ್‌ಪೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X