ಸಂಕ್ರಮಣ ಸ್ನಾನಕ್ಕೆ ಹೋದ ರಾಯಚೂರಿನ ಮೂವರು ಯುವಕರು ಜಲ ಸಮಾಧಿ
ರಾಯಚೂರು : ಸಂಕ್ರಮಣ ಸ್ನಾನ ಮಾಡಲೆಂದು ಹೊರಟ ಮೂವರು ಯುವಕರು ಸೋಮವಾರ ಕೃಷ್ಣಾ ನದಿ ಪಾಲಾಗಿದ್ದಾರೆ.
ನೀರಿನಲ್ಲಿ ಕೊಚ್ಚಿಹೋದ ಮೂವರ ಪೈಕಿ ಇಬ್ಬರ ಹೆಸರು ಮಾತ್ರ ಗೊತ್ತಾಗಿದೆ. ಪ್ರವೀಣ್ ಕುಮಾರ್ (23) ಹಾಗೂ ಈಶ್ವರ (18) ಎಂಬುವರೇ ಈ ಇಬ್ಬರು. ಮತ್ತೊಬ್ಬ ಯಾರೆಂಬುದು ಪತ್ತೆಯಾಗಿಲ್ಲ. ಸಂಕ್ರಾಂತಿ ಸಂದರ್ಭದಲ್ಲಿ ನೂರಾರು ಮಂದಿ ಕೃಷ್ಣಾ ನದಿಯಲ್ಲಿ ಸೋಮವಾರ ಪವಿತ್ರ ಸ್ನಾನ ಮಾಡಿದರು.
ನೀರಿನಲ್ಲಿ ಕೊಚ್ಚಿ ಹೋಗಿರುವ ಮೂವರೂ ರಾಯಚೂರಿನವರು. ಮೃತರ ಪೈಕಿ ಈಶ್ವರ ಎಲ್‌ವಿಡಿ ಕಾಲೇಜಿನಲ್ಲಿ ದ್ವಿತೀಯ ಪಿಯೂಸಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications