ಕುಂಬ್ಳೆಗೆ ಇನ್ನೊಂದು ವಿಕೆಟ್ ಬೇಕು,ಭಾರತಕ್ಕೆ ಜಯ ಬೇಕು
ಬೆಂಗಳೂರು : ಭಾರತ ತಂಡದ ಪ್ರಮುಖ ಸ್ಪಿನ್ನಿಗ ಅನಿಲ್ ಕುಂಬ್ಳೆ ಇನ್ನೊಂದು ವಿಕ್ರಮದತ್ತ ಹೆಜ್ಜೆಯಿಟ್ಟಿದ್ದಾರೆ. ಇನ್ನೊಂದು ವಿಕೆಟ್ ಗಳಿಸಿದರಾದರೆ- ಅವರ ಬತ್ತಳಿಕೆಗೆ 300 ವಿಕೆಟ್ ಸಂಪಾದನೆ! ಆ ಕಾರಣದಿಂದಾಗಿಯೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಡಿ.19) ದಿಂದ ಪ್ರಾರಂಭವಾಗುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಅನಿಲ್‌ಕುಂಬ್ಳೆ ಅವರೇ ಕೇಂದ್ರಬಿಂದು.
65 ಟೆಸ್ಟ್‌ಗಳಿಂದ 299 ವಿಕೆಟ್ ಪಡೆದಿರುವ ಕುಂಬ್ಳೆ 300 ವಿಕೆಟ್ ಪಡೆದ ಮೊದಲ ಭಾರತೀಯ ಸ್ಪಿನ್ನರ್ ಎನ್ನುವ ಖ್ಯಾತಿಗೆ ಪಾತ್ರವಾಗಲಿದ್ದಾರೆ. 434 ವಿಕೆಟ್‌ಗಳನ್ನು ಪಡೆದಿರುವ ಕಪಿಲ್‌ದೇವ್ ಬಿಟ್ಟರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನ್ನುವ ಗೌರವ ಕೂಡ ಕುಂಬ್ಳೆ ಅವರದೇ.
11 ವರ್ಷಗಳ ಹಿಂದೆ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನ ಪ್ರಾರಂಭಿಸಿದ ಕುಂಬ್ಳೆ ಆನಂತರದಲ್ಲಿ ನೆಟ್ಟ ಮೈಲಿಗಲ್ಲು ಒಂದೆರಡಲ್ಲ . 1998-99 ರಲ್ಲಿ ದೆಹಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಪಾಕಿಸ್ತಾನದ ಹತ್ತೂ ವಿಕೆಟ್‌ಗಳನ್ನು ಕೀಳುವ ಮೂಲಕ ಕುಂಬ್ಳೆ ಅಂತರರಾಷ್ಟ್ರೀಯ ಗಮನ ಸೆಳೆದಿದ್ದರು. ಇಂಗ್ಲೆಂಡ್‌ನ ಜಿಮ್ ಲೇಕರ್ 10 ವಿಕೆಟ್‌ಗಳ ಸಾಧನೆಗೈದ ಇನ್ನೊಬ್ಬ ಅಪ್ರತಿಮ.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications