ಆಫ್ಘಾನಿಸ್ತಾನದಲ್ಲಿ ಆ್ಯಂಥ್ರಾಕ್ಸ್ ಮನೆಗಳನ್ನೇ ಕಟ್ಟಿಸಿದ್ದಾನೆ ಪಾತಕಿ ಒಸಾಮ!
ನ್ಯೂಯಾರ್ಕ್ : ಒಸಾಮ ನೇತೃತ್ವದ ಅಲ್ ಕ್ವೆದಾ ಸಂಘಟನೆ ಆಫ್ಘಾನಿಸ್ತಾನದಲ್ಲಿ ಆ್ಯಂಥ್ರಾಕ್ಸ್ ಉಗ್ರಾಣಗಳನ್ನು ಸ್ಥಾಪಿಸಿರುವುದನ್ನು ಅಮೆರಿಕಾ ಪಡೆಗಳು ಪತ್ತೆ ಹಚ್ಚಿವೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.
ಈ ಆ್ಯಂಥ್ರಾಕ್ಸ್ ಉಗ್ರಾಣಗಳು ಈಗ ಅಮೆರಿಕಾ ಬಾಂಬ್ ದಾಳಿಯಿಂದ ಅಕ್ಷರಶಃ ಧ್ವಂಸವಾಗಿವೆ. ಇಲ್ಲಿಂದ ಆ್ಯಂಥ್ರಾಕ್ಸನ್ನು ಹೊತ್ತೊಯ್ದು, ಅಮೆರಿಕಾ ಮೇಲೆ ಬಿಸುಟಿರುವ ಬಗೆಗೆ ಯಾವುದೇ ಪುರಾವೆ ದೊರೆತಿಲ್ಲ. ಬೇಹುಗಾರಿಕಾ ದಳಗಳು ಪತ್ತೆ ಹಚ್ಚಿರುವ ಮಾಹಿತಿಗಳ ಪೈಕಿ ಮುಖ್ಯವಾದದ್ದೆಂದರೆ, ಈ ವೈರಾಣುಗಳ ತಯಾರಿಕೆಯಲ್ಲಿ ರಷ್ಯಾದ ವಿಜ್ಞಾನಿಗಳ ಸಹಾಯವಿದೆ. ಡಾ. ಅಯ್ಮಾನ್ ಅಲ್- ಜವಾಹಿರಿ ಎಂಬ ಒಸಾಮನ ನಿಕಟವರ್ತಿ ವಿಜ್ಞಾನಿ ಆ್ಯಂಥ್ರಾಕ್ಸ್ ಅಸ್ತ್ರ ತಯಾರಿಕೆಯ ರೂವಾರಿ ಎಂದು ನಂಬಲಾಗಿದೆ.
ನ್ಯೂಸ್ ವೀಕ್ ವರದಿ ಮಾಡಿರುವಂತೆ, ಅಲ್- ಜವಾಹಿರಿ ಭಯೋತ್ಪಾದಕ ತಂಡಗಳ ಹುಟ್ಟುಹಾಕಿರುವ ಪ್ರಮುಖರಲ್ಲಿ ಒಬ್ಬ. ಜೊತೆಗೆ ಈತ ಜಗಜ್ಜಾಣ. ಸಂಶೋಧನೆಗಳಲ್ಲಿ ಎತ್ತಿದ ಕೈ. ಅಮೆರಿಕ ಬಾಂಬ್ ದಾಳಿಯಲ್ಲಿ ಈತ ಸತ್ತು ಹೋಗಿರಬಹುದೆಂದು ತಿಳಿಯಲಾಗುತ್ತಿದೆ. ಬೇಹುಗಾರಿಕಾ ಪಡೆಗಳು ಈತನ ಮನೆಗೆ ಹೊಕ್ಕಾಗ, ಅದು ಪಾಳು ಬಿದ್ದಂತಾಗಿತ್ತು. ಮನೆಯ ಅಸ್ತಿತ್ವ ಅಲ್- ಜವಾಹಿರಿ ಒಬ್ಬ ಹುಚ್ಚು ವಿಜ್ಞಾನಿ ಎಂಬುದನ್ನು ಬಿಂಬಿಸುತ್ತಿತ್ತು.
(ಪಿಟಿಐ)
ಮುಖಪುಟ / ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’












Click it and Unblock the Notifications