ಕುಕ್ಕೆ ಸುಬ್ರಹ್ಮಣ್ಯನಿಗೆ ಚಿನ್ನ - ಬೆಳ್ಳಿಯ ಬಾಗಿಲುಗಳ ಕಾಣಿಕೆ
ಕುಕ್ಕೆ ಸುಬ್ರಹ್ಮಣ್ಯ : ಉದ್ಯಮಿ ವಿಜಯಮಲ್ಯ ಅವರು ಕುಮಾರ ಪರ್ವತ ಶ್ರೇಣಿಯಲ್ಲಿ ಧಾರಾನದಿಯ ತಟದಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಒಂದು ಚಿನ್ನದ ಬಾಗಿಲು ಮತ್ತು ಎರಡು ಬೆಳ್ಳಿಯ ಬಾಗಿಲುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ತಮ್ಮ ಇಷ್ಟಾರ್ಥ ಕೋರಿಕೆಗಾಗಿ ಹರಕೆ ಹೊತ್ತಿದ್ದ ಅವರು, ಶನಿವಾರ ಮಧ್ಯಾಹ್ನ ದೇವಾಲಯಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಒಂದು ಸುವರ್ಣಹಾಗೂ ಎರಡು ರಜತ ದ್ವಾರಗಳನ್ನು ಸುಬ್ರಹ್ಮಣ್ಯನಿಗೆ ಸಮರ್ಪಿಸುವ ಮೂಲಕ ತಮ್ಮ ಹರಕೆ ತೀರಿಸಿದರು.
ಈ ಮೂರು ಬಾಗಿಲುಗಳ ಒಟ್ಟು ಮೌಲ್ಯ 48 ಲಕ್ಷ ರುಪಾಯಿಗಳಾಗುತ್ತವೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications