ಇನ್ಫೋಸಿಸ್ ನಾರಾಯಣಮೂರ್ತಿ; ವಿಶ್ವದ 21ನೇ ಪ್ರಭಾವೀ ಸಿಇಓ
ಬೆಂಗಳೂರು : ವಿಶ್ವದ 25 ಮಂದಿ ಪ್ರಭಾವಿ ಕಾರ್ಯನಿರ್ವಾಹಕ ಅಧಿಕಾರಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಸಾಫ್ಟ್ವೇರ್ ಕಂಪೆನಿಯ ಮುಖ್ಯಸ್ಥ ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಎನ್. ಆರ್. ನಾರಾಯಣಮೂರ್ತಿ ಸ್ಥಾನ ಪಡೆದಿದ್ದಾರೆ.
ಪ್ರತಿಷ್ಠಿತ ದಿ ಟೈಮ್ ಪತ್ರಿಕೆ ನಾರಾಯಣ ಮೂರ್ತಿ ಅವರನ್ನು ಪ್ರಭಾವೀ ಕಾರ್ಯನಿರ್ವಾಹಕನೆಂದು ಗುರುತಿಸಿದ್ದು, ಶ್ರೀಮಂತಿಕೆಯ ಜೊತೆಗೆ ಉದ್ದಾತ್ತ ಮೌಲ್ಯಗಳನ್ನು ಹರಡುವಲ್ಲಿ ನಾರಾಯಣ ಮೂರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ. ಟೈಮ್ ಪತ್ರಿಕೆಯ ಈ ಪಟ್ಟಿಯಲ್ಲಿರುವ ಇರುವ ಏಕೈಕ ಭಾರತೀಯನ ಹೆಸರು ನಾರಾಯಣ ಮೂರ್ತಿಯವರದು.
25 ಮಂದಿ ಪ್ರಭಾವೀ ಕಾರ್ಯನಿರ್ವಾಹಕ ಅಧಿಕಾರಿಗಳ ಪಟ್ಟಿಯಲ್ಲಿ ನಾರಾಯಣ ಮೂರ್ತಿ ಅವರದು 21ನೇ ಹೆಸರು. ಇತ್ತೀಚಿನ ದಶಕಗಳಲ್ಲಿ ಟೈಮ್ ಪತ್ರಿಕೆಯ ಪಟ್ಟಿಯಲ್ಲಿ ರಾಜ್ಯದ ಯಾವ ವ್ಯಕ್ತಿಯ ಹೆಸರು ಉಲ್ಲೇಖವಾಗಿರಲಿಲ್ಲ.
25 ಮಂದಿಯ ಪಟ್ಟಿಯಲ್ಲಿ ವಿಶ್ವದ ಅಗ್ರಮಾನ್ಯ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕರ ಹೆಸರುಗಳಿವೆ. ಜಪಾನಿನ ನಿಸ್ಸಾನ್ನ ಕಾರ್ಲೋಸ್ ಘೋಷಮ್, ಮೈಕ್ರೋಸಾಫ್ಟ್ ಕಂಪೆನಿಯ ಬಿಲ್ ಗೇಟ್ಸ್, ಎಒಎಲ್ ಟೈಮ್ ವಾರ್ನರ್ ಕಂಪೆನಿಯ ಜೆರ್ರಿ ಲೆವೆನ್ ಹಾಗೂ ಸ್ಟೀವ್ ಕೇಸ್ ಪಟ್ಟಿಯ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಮಾಧ್ಯಮ ಸಾಮ್ರಾಟನೆನಿಸಿಕೊಂಡಿರುವ ನ್ಯೂಸ್ ಕಾರ್ಪ್ ಕಂಪೆನಿಯ ರುಪರ್ಟ್ ಮುರ್ಡೋಕ್ 10 ನೇ ಸ್ಥಾನದಲ್ಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications