ಗುಲ್ಬರ್ಗಾದಿಂದ ಅಮೆರಿಕಾ ಮುಟ್ಟಿದ ಕುಳ್ಳಿಯವರ ಗಣಿತ ಸಾಧನೆ
ಗುಲ್ಬರ್ಗಾ: ಗಣಿತ ಶಾಸ್ತ್ರದಲ್ಲಿ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಹಾಗೂ ಸಿಂಡಿಕೇಟ್ ಸದಸ್ಯರಾಗಿರುವ ಡಾ। ವೀರಭದ್ರಪ್ಪ ಆರ್. ಕುಳ್ಳಿ ಅವರು ಮಾಡಿರುವ ಸಾಧನೆಯನ್ನು ಗುರ್ತಿಸಿ, ಅಮೆರಿಕಾದ ಬಯಾಗ್ರಫಿಕಲ್ ಸಂಸ್ಥೆ ತನ್ನ ಸಲಹಾ ಸಮಿತಿ ಸಲಹೆಗಾರರನ್ನಾಗಿ ಅವರನ್ನು ನೇಮಿಸಿಕೊಳ್ಳುವ ಮೂಲಕ ಗೌರವಿಸಿದೆ.
ಡಾ। ವೀರಭದ್ರಪ್ಪ ಅವರಿಗೆ ಸಲಹಾ ಸಮಿತಿ ಸಲಹೆಗಾರರ ಗೌರವ ಮಾತ್ರವಲ್ಲದೆ ಬಯಾಗ್ರಫಿಕಲ್ ಸಂಸ್ಥೆ ಚಿನ್ನದ ಪದಕವನ್ನು ನೀಡಿದೆ. ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವೀಧರರಾದ ವೀರಭದ್ರಪ್ಪನವರು ಗಣಿತದ ಗ್ರಾಫಿ ಥಿಯರಿಯಲ್ಲಿ ಗಣನೀಯ ಸಂಶೋಧನೆಗಳನ್ನು ಮಾಡಿದ್ದಾರೆ.
ತಾಂಜಾನಿಯ ವಿಶ್ವ ವಿದ್ಯಾಲಯದಲ್ಲಿ 2 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಅವರು, ಏಷ್ಯಾದಲ್ಲಿಯೇ ಮೊದಲನೆಯದೆನ್ನಲಾದ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಗ್ರಾಫ್ ಥಿಯರಿಯ ಸಂಪಾದಕರೂ ಹೌದು. ಅಂತರರಾಷ್ಟ್ರೀಯ ಪ್ರಸಾರ ಹೊಂದಿರುವ ಈ ಜರ್ನಲ್ ಗುಲ್ಬರ್ಗಾದಿಂದಲೇ ಪ್ರಕಟವಾಗುತ್ತಿದೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications