ಕುಂಬ್ಳೆ ಸ್ಪಿನ್ ಸುಳಿಗೆ ಇಂಗ್ಲೆಂಡ್ ಬಲಿ; ಭಾರತಕ್ಕೆ 10 ವಿಕೆಟ್ ಜಯ
ಮೊಹಾಲಿ : ಅನಿಲ್ ಕುಂಬ್ಳೆ ಅವರ ಮಾರಕ ಸ್ಪಿನ್ ಸುಳಿಯಲ್ಲಿ ಇಂಗ್ಲೆಂಡ್ ಸಿಲುಕುವುದರೊಂದಿಗೆ, ಇನ್ನೂ ಒಂದೂವರೆ ದಿನದ ಆಟ ಉಳಿದಿರುವಂತೆಯೇ ಗುರುವಾರ ಇಲ್ಲಿ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಭಾರತ 10 ವಿಕೆಟ್ಗಳ ಜಯ ಸಾಧಿಸಿತು.
ಭಾರತ ಗಳಿಸಿದ್ದ 231 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯನ್ನು ಅಳಿಸಿಹಾಕಲು ಇಂಗ್ಲೆಂಡ್ ಯಶಸ್ವಿಯಾದರೂ ಅಂತಿಮವಾಗಿ ಭಾರತಕ್ಕೆ ಒಡ್ಡಲು ಸಾಧ್ಯವಾದದ್ದು 5 ರನ್ಗಳ ಗುರಿ ಮಾತ್ರ. ಈ ಗುರಿಯನ್ನು ಭಾರತ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು. ಇತ್ತೀಚೆಗಿನ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸೋತು ಸುಣ್ಣವಾಗಿದ್ದ ಭಾರತ ತಂಡಕ್ಕೆ ಈ ಗೆಲುವು ಹೊಸ ಹುಮ್ಮಸ್ಸು ತುಂಬಿದೆ.
ಬುಧವಾರ ಆಟದ ಕೊನೆಗೆ ವಿಕೆಟ್ ನಷ್ಟವಿಲ್ಲದೆ 34 ರನ್ ಗಳಿಸಿದ್ದ ಇಂಗ್ಲೆಂಡ್ ಗುರುವಾರ ಬೆಳಗ್ಗೆ ಆತ್ಮ ವಿಶ್ವಾಸದಿಂದ ಆಟ ಪ್ರಾರಂಭಿಸಿದರೂ, ಮೊದಲ ವಿಕೆಟ್ ಪತನದ ನಂತರ ನಿಯಮಿತವಾಗಿ ವಿಕೆಟ್ಗಳು ಬೀಳುತ್ತಲೇ ಹೋದವು. ಭಾರತದ ಪರವಾಗಿ ಅನಿಲ್ ಕುಂಬ್ಳೆ 6, ಹರ್ಭಜನ್ ಸಿಂಗ್ 2 ಹಾಗೂ ಯಾಹಾನ 2 ವಿಕೆಟ್ ಪಡೆದರು. 62 ರನ್ ಹೊಡೆದ ಥೋರ್ಪ್ ಇಂಗ್ಲೆಂಡ್ ಪರ ಯಶಸ್ವಿ ಬ್ಯಾಟ್ಸ್ಮನ್ ಎನಿಸಿದರು. ಒಟ್ಟು 8 ವಿಕೆಟ್ ಪಡೆದು, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕುಂಬ್ಳೆ ಪಂದ್ಯ ಪುರುಷೋತ್ತಮ ಎನಿಸಿದರು.
ಸಂಕ್ಷಿಪ್ತ ಸ್ಕೋರ್ :
ಇಂಗ್ಲೆಂಡ್- 238 ಹಾಗೂ 235
ಭಾರತ - 469 ಹಾಗೂ ವಿಕೆಟ್ ನಷ್ಟವಿಲ್ಲದೆ 05
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications