ಈರೋಡ್ ಪೊಲೀಸರಿಂದ ವೀರಪ್ಪನ್ ಸಹಚರ ಪಸುವಣ್ಣನ ಬಂಧನ
ಕೊಯಮತ್ತೂರು : ವೀರಪ್ಪನ್‌ನ ಮತ್ತೊಬ್ಬ ಸಮೀಪವರ್ತಿ ಪಸುವಣ್ಣ ಎಂಬುವನನ್ನು ಈರೋಡ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಕಂಡವೇಲು ಎಂಬ ಚಹಾ ತೋಟವೊಂದರ ಮಾಲೀಕನನ್ನು ಕೊಂದ ಆಪಾದನೆ ಎದುರಿಸುತ್ತಿರುವ ಪಸುವೇಲುವನ್ನು ಅಂಧಿಯೂರು ಅರಣ್ಯ ಪ್ರದೇಶದಲ್ಲಿ ಬಂಧಿಸಲಾಯಿತು. ಭವಾನಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ, ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. ತನ್ನ ಚಲನವಲನಗಳ ಬಗ್ಗೆ ಪೊಲೀಸರಿಗೆ ಕಂಡವೇಲು ಮಾಹಿತಿ ನೀಡುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ವೀರಪ್ಪನ್ ಕೊಲ್ಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿದ ಮುತ್ತುಲಕ್ಷ್ಮಿ : ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ತಮಿಳುನಾಡಿನ ಸೇಲಂ ಜ್ಯುಡಿಷಿಯಲ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಡಿಸೆಂಬರ್ 6ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ. ಈಗ ಎಸ್‌ಟಿಎಫ್ ಪೊಲೀಸರ ಬಂಧನದಲ್ಲಿರುವ ವೀರಪ್ಪನ್ ಸಹವರ್ತಿಗಳು ಹೇಳಿರುವಂತೆ ವೀರಪ್ಪನ್ ಜೊತೆ ಮತ್ತೆ ಮುತ್ತುಲಕ್ಷ್ಮಿ ಒಡನಾಟವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಮುತ್ತುಲಕ್ಷ್ಮಿಯನ್ನು ಎಸ್‌ಟಿಎಫ್ ಪೊಲೀಸರು ಬಂಧಿಸಲಿದ್ದಾರೆ ಎಂಬ ಸುದ್ದಿ ದಟ್ಟೈಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications