ಕುಂದಾಪುರದಲ್ಲಿ ಡಿ.22ರಿಂದ ಕುಂದ-ಕರಾವಳಿ ಉತ್ಸವ
ಕುಂದಾಪುರ : ಇಲ್ಲಿನ ಗಾಂಧಿ ಮೈದಾನದಲ್ಲಿ ಡಿಸೆಂಬರ್ 22ರಿಂದ 31ರವರೆಗೆ ಮೊತ್ತ ಮೊದಲ ಕುಂದ-ಕರಾವಳಿ ಉತ್ಸವವನ್ನು ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ಸುಮಾರು 50 ವೈವಿಧ್ಯಮಯ ವಸ್ತು ಹಾಗೂ ವಾಣಿಜ್ಯ ಪ್ರದರ್ಶನ ನಡೆಯಲಿದ್ದು, ಕರಾವಳಿಯನ್ನು ಪರಿಚಯಿಸುವ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಪ್ರತಿಭಾವಂತರಿಂದ ಪ್ರತಿಭಾ ಪ್ರದರ್ಶನ, ಗಣ್ಯ ಅತಿಥಿಗಳ ಭಾಗವಹಿಸುವಿಕೆಯಾಂದಿಗೆ ಕುಂದ-ಕರಾವಳಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
22ರಂದು ಆರಂಭವಾಗುವ ಉತ್ಸವ, ಕ್ರಮವಾಗಿ ಮಹಿಳಾ ದಿನ, ಜಾನಪದ ಉತ್ಸವ, ಹಾಸ್ಯೋತ್ಸವ, ಪತ್ರಿಕಾ ದಿನ, ಕೊಂಕಣ ಸಂಸ್ಕೃತಿ ದಿನ, ಯುವದಿನ, ಮನೋರಂಜನಾದಿನ, ಸಾಹಿತ್ಯೋತ್ಸವ ಮತ್ತು ಕೊನೆಯ ದಿನದಂದು ಕುಂದಪ್ರಭ ಪತ್ರಿಕೆಯ ದಶಮಾನೋತ್ಸವವನ್ನು ಆಚರಿಸಲಾಗುವುದು.
ಕುಂದಾಪುರ ಉಪ ವಿಭಾಗಾಧಿಕಾರಿ ಡಾ. ಕೆ.ಎಂ. ಅಪ್ಪಯ್ಯ ಅವರ ನೇತೃತ್ವದಲ್ಲಿ ಕುಂದ ಕರಾವಳಿ ಉತ್ಸವ ಸಮಿತಿಯನ್ನು ರಚಿಸಲಾಗಿದೆ. ಕುಂದಪ್ರಭ ಪತ್ರಿಕೆಯ ಸಂಪಾದಕ ಹಾಗೂ ಉತ್ಸವದ ಸಂಚಾಲಕ ಯು.ಎಸ್. ಶೆಣೈ 10 ದಿನಗಳ ಉತ್ಸವದ ಯಶಸ್ಸಿಗೆ ತಾಲ್ಲೂಕಿನ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
(ಇನ್ಫೋ ವಾರ್ತೆ)ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications