ಡಿಸೆಂಬರ್ 7ರಿಂದ ಬೆಂಗಳೂರಿನಲ್ಲಿ ‘ಸ್ಟ್ರಾಂಡ್ ಪುಸ್ತಕೋತ್ಸವ’
ಬೆಂಗಳೂರು : ನಗರದ ಸ್ಟ್ರಾಂಡ್ ಬುಕ್ ಸ್ಟಾಲ್‌ನ ಏಳನೇ ವಾರ್ಷಿಕ ಪುಸ್ತಕೋತ್ಸವ ಡಿಸೆಂಬರ್ ಏಳರಂದು ಪ್ರಾರಂಭವಾಗಲಿದೆ.
12 ದಿನಗಳ ಕಾಲ ನಡೆಯುವ ಈ ಪುಸ್ತಕೋತ್ಸವದಲ್ಲಿ ಶ್ರೇಷ್ಠ ಬರಹಗಾರರ ಪುಸ್ತಕಗಳು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರಕಲಿವೆ. ಸುಮಾರು ಶೇ 20ರಿಂದ 80ರವರೆಗೂ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುವುದು ಎಂದು ಪುಸ್ತಕದಂಗಡಿಯ ವಿದ್ಯಾವೀರಕರ್ ತಿಳಿಸಿದ್ದಾರೆ.
ನಗರದ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಷನ್‌ನಲ್ಲಿ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದ್ದು, ಕಲೆ, ಸಾಹಿತ್ಯ, ಆರೋಗ್ಯ, ವಿಜ್ಞಾನ , ತಂತ್ರಜ್ಞಾನ ಮುಂತಾದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗುವುದು. ಒಟ್ಟು ಸುಮಾರು 30 ಸಾವಿರಕ್ಕೂ ಹೆಚ್ಚು ನಮೂನೆಯ ಪುಸ್ತಕಗಳು ಈ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಬೆಳಗ್ಗೆ 10.30ಕ್ಕೆ ಪ್ರದರ್ಶನ ಆರಂಭವಾಗುತ್ತದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications