ಸುಪ್ರಿಂಕೋರ್ಟ್ ಕಟಕಟೆಗೆ ಬಂದು ನಿಂತಿರುವ ಕಾವೇರಿ ತಕರಾರು
ಬೆಂಗಳೂರು : ಕಾವೇರಿ ನದಿ ಪ್ರಾಧಿಕಾರದ ಸಭೆ ವಿಫಲವಾದ ಬಳಿಕ, ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ(ಡಿ.3)ದಿಂದ ಪ್ರಾರಂಭವಾಗಲಿದೆ.
ಕುರುವೈ ಬೆಳೆ ಒಣಗುತ್ತಿದ್ದರೂ ಕರ್ನಾಟಕ ಸರ್ಕಾರ ನೀರು ಬಿಡದೆ ಸತಾಯಿಸುತ್ತಿದೆ. ಈ ಸಂಬಂಧ ಪ್ರತಿನಿತ್ಯ 1 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡುವಂತೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು . ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಕೂಡ ಮೆಟ್ಟೂರು ಜಲಾಶಯಕ್ಕೆ ಕರ್ನಾಟಕ ನೀರು ಬಿಟ್ಟಿಲ್ಲ. ಹೀಗಾಗಿ ತಮಿಳುನಾಡಿನ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದೂ ತನ್ನ ಅರ್ಜಿಯಲ್ಲಿ ತಮಿಳುನಾಡು ಸರ್ಕಾರ ತಿಳಿಸಿತ್ತು .
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನ್ಯಾಯಮಂಡಳಿ ನೀಡಿರುವ ಮಧ್ಯಂತರ ತೀರ್ಪನ್ನು ಕೂಡ ಕರ್ನಾಟಕ ಸ್ಪಷ್ಟವಾಗಿ ಉಲ್ಲಂಘಿಸಿದೆ. ನ್ಯಾಯಮಂಡಳಿಯ ತೀರ್ಪನ್ನು ಅನುಷ್ಠಾನಕ್ಕೆ ತರುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಬೇಕೆಂದೂ ತಮಿಳುನಾಡು ಸರ್ಕಾರ ಸುಪ್ರಿಂಕೋರ್ಟನ್ನು ಕೋರಿತ್ತು .
ಈಗ ನೀರಿನ ಕೊರತೆಯಿಲ್ಲ , ಸಮಸ್ಯೆ ಬಗೆಹರಿದಿದೆ
ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿ 70 ಟಿಎಂಸಿ ನೀರು ಸಂಗ್ರಹವಿದ್ದು ತಮಿಳುನಾಡಿನ ರೈತರು ಯಾವುದೇ ಸಂಕಷ್ಟ ಎದುರಿಸುತ್ತಿಲ್ಲ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಉಭಯ ರಾಜ್ಯಗಳಲ್ಲೂ ಉತ್ತಮ ಮಳೆಯಾಗಿರುವುದರಿಂದ ಬಿಕ್ಕಟ್ಟು ಈಗ ಬಗೆಹರಿದ ವಿಷಯ ಎಂದು ಪಾಟೀಲ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಪಂಪಾಕ್ಷೇತ್ರದ ಸುತ್ತಮುತ್ತ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications