ಪಟಾಕಿ ಸಿಡಿದು ಆಸ್ಪತ್ರೆಗೆ ಹೋದ ಬೆಂಗಳೂರಿನ 30 ಮಕ್ಕಳು
ಬೆಂಗಳೂರು : ಕಳಪೆ ಗುಣ ಮಟ್ಟದ ಪಟಾಕಿಗಳು ಅಥವಾ ಎಚ್ಚರಿಕೆ ವಹಿಸದೆ ಹಚ್ಚಿದ ಪರಿಣಾಮ ಸುಟ್ಟ ಗಾಯಗಳಾಗಿ, ಸುಮಾರು 30 ಮಕ್ಕಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಈವರೆಗೆ ಚಿಕಿತ್ಸೆ ಪಡೆದಿದ್ದಾರೆ.
ಶುಕ್ರವಾರ ಒಂದೇ ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 6 ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಸುನಿತಾ (15) ಮತ್ತು ಗೋವರ್ಧನ್‌ಗೆ ಹೆಚ್ಚು ಸುಟ್ಟ ಗಾಯಗಳಾಗಿದ್ದವು. ಸುನಿತಾ ದೇಹ ಪ್ರತಿಶತ 30ರಷ್ಟು ಸುಟ್ಟಿದೆ. ಮೊದಲೇ ಹಚ್ಚಿದ್ದ ಪಟಾಕಿಗಳ ರಾಶಿ ಮಾಡಿ ಬೆಂಕಿ ಇಟ್ಟ ಕಾರಣ, ಸ್ಫೋಟಗೊಂಡು ಗೋವರ್ಧನ ಗಾಯಾಳುವಾದ.
ನಗರದ ಅನೇಕ ಕಡೆ ಪೊಲೀಸರು ಧ್ವನಿ ವರ್ಧಕಗಳ ಮೂಲಕ ಪಟಾಕಿ ಹಚ್ಚುವ ನಿಯಮಾವಳಿಗಳನ್ನು ಹೇಳುತ್ತಲೇ ಸಾಗಿದ್ದರು. 10 ಗಂಟೆಯ ನಂತರ ಪಟಾಕಿ ಹೊಡೆಯಕೂಡದೆಂದು ಬೊಬ್ಬೆ ಹೊಡೆಯುತ್ತಿದ್ದರೂ, ಆ ನಿಯಮವನ್ನು ಎಷ್ಟೋ ಕಡೆ ಗಾಳಿಗೆ ತೂರಲಾಯಿತು. 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಮಾರುವುದು ನಿಷೇಧ. ಅದನ್ನೂ ಮೀರಿ ಮಾರಾಟ ಮಾಡಿರುವ 12 ಪ್ರಕರಣಗಳನ್ನು ನಗರ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ ವರದಿ : ಉಣಕಲ್ ಕ್ರಾಸ್‌ನ ಪ್ರಕಾಶ ಮಾಲಸೂರೆ (11) ಎಂಬ ಹುಡುಗನಿಗೆ ಶುಕ್ರವಾರ ಮಧ್ಯಾಹ್ನ ಪಟಾಕಿ ಸ್ಫೋಟಿಸಿ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎದೆ ಮತ್ತು ಹೊಟ್ಟೆಯ ಭಾಗಗಳಿಗೆ ಸುಟ್ಟ ಗಾಯಗಳಾಗಿದ್ದು, ಬೊಬ್ಬೆ ಎದ್ದಿದೆ.
(ಇನ್ಫೋ ವಾರ್ತೆ)
ಮುಖಪುಟ / ದೀಪಾವಳಿ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications