Get Updates
Get notified of breaking news, exclusive insights, and must-see stories!

ಹಳ್ಳಿಗಾಡಿಗೂ ಹೈಟೆಕ್‌ ಶಿಕ್ಷಣ! ಉಪಗ್ರಹ ಶಿಕ್ಷಣ ಜಾಲಕ್ಕೆ ಚಾಲನೆ

ಬೆಂಗಳೂರು : ದೇಶದ ಹಿಂದುಳಿದ ಪ್ರದೇಶಗಳಲ್ಲೂ ಉಪಗ್ರಹದ ಮೂಲಕ ಅತ್ಯಾಧುನಿಕ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದಾದ ದೂರಶಿಕ್ಷಣ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಗುರುವಾರ ಸಾಂಕೇತಿಕವಾಗಿ ಉದ್ಘಾಟಿಸಿದರು.

ಸಿಂಗಪುರ್‌ ಮೂಲದ ಸ್ಕೈಸ್ಯಾಟ್‌ ಹೋಲ್ಡಿಂಗ್ಸ್‌ ಹಾಗೂ ಹಿಂದೂಸ್ತಾನ್‌ ಟೆಕ್ನಾಲಜೀಸ್‌ ಲಿಮಿಟೆಡ್‌(ಎಚ್‌ಟಿಎಲ್‌) ರೂಪಿಸಿರುವ ಈ ದೂರಶಿಕ್ಷಣ ಜಾಲ ಪ್ರಸ್ತುತ 100 ಕೇಂದ್ರಗಳು ಹಾಗೂ 15 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಎಚ್‌ಟಿಎಲ್‌- ಸ್ಕೈಸ್ಯಾಟ್‌ನೊಂದಿಗೆ ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮಣಿಪಾಲ್‌ ಗ್ರೂಪ್ಸ್‌ ಉಪಗ್ರಹ ಮೂಲಕ ದೂರಶಿಕ್ಷಣ ಕಾರ್ಯಕ್ರಮದಲ್ಲಿ ಕೈ ಜೋಡಿಸಿದೆ.

ಮುಂದಿನ ವರ್ಷದ ಮಧ್ಯದ ವೇಳೆಗೆ ಈ ಶಿಕ್ಷಣ ಜಾಲವು 250 ಕೇಂದ್ರಗಳು ಹಾಗೂ 38 ಸಾವಿರ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಗುರಿ ಹೊಂದಿದೆ. ನಂತರದ ದಿನಗಳಲ್ಲಿ ಈ ಶಿಕ್ಷಣ ಜಾಲವು ಸ್ವಂತ ಉಪಗ್ರಹ ಹೊಂದುವುದೆಂದು ಎಚ್‌ಟಿಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಹರನ್‌ ಮೋಸಸ್‌ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸ್ಟುಡಿಯೋದ ಮೂಲಕ ಉಪನ್ಯಾಸ ನೀಡುವ ಉಪನ್ಯಾಸಕನ ಚಿತ್ರ ಹಾಗೂ ಧ್ವನಿ ದೇಶದ ವಿವಿಧ ಮೂಲೆಗಳಲ್ಲಿನ ಕೇಂದ್ರಗಳಲ್ಲಿ ಉಪಗ್ರಹದ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ . ಮಾನಿಟರ್‌ ಮೂಲಕ ಉಪನ್ಯಾಸವನ್ನು ವಿದ್ಯಾರ್ಥಿಗಳು ನೋಡಬಹುದು. ಸಂದೇಹಗಳಿದ್ದಲ್ಲಿ ನೇರವಾಗಿ ಪ್ರಶ್ನೆ ಕೇಳಬಹುದು. ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ನೇರ ಸಂವಾದವೂ ಸಾಧ್ಯ ಎಂದು ಮನೋಹರನ್‌ ತಿಳಿಸಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+