ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರೀಕರಣದತ್ತ ಬೆಳಗಾವಿ, ಧಾರವಾಡ ಸಾರಿಗೆ ಕಚೇರಿ

By Super
|
Google Oneindia Kannada News

ಧಾರವಾಡ, ನ. 7 : ಬೆಳಗಾವಿ ಮತ್ತು ಧಾರವಾಡದ ಪ್ರಾದೇಶಿಕ ಸಾರಿಗೆ ಕಚೇರಿಗಳು 2002 ನೇ ಇಸವಿಯ ಸೆಪ್ಟಂಬರ್‌ನೊಳಗೆ ಸಂಪೂರ್ಣ ಗಣಕೀಕೃತಗೊಳ್ಳಲಿವೆ ಎಂದು ಉತ್ತರ ವಲಯ ಜಂಟಿ ಸಾರಿಗೆ ಆಯುಕ್ತ ವಿಜಯ್‌ ವಿಕ್ರಂ ಹೇಳಿದ್ದಾರೆ.

ಹೊಸ ಲೈಸೆನ್ಸ್‌ಗಳನ್ನು ಪಡೆಯುವಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಗಣಕೀಕರಣಕ್ಕೆ ಆದ್ಯತೆ ನೀಡಲಾಗಿದೆ. ಹೊಸ ಲೈಸೆನ್ಸ್‌ , ಲೈಸೆನ್ಸ್‌ ನವೀಕರಣ ಹಾಗೂ ಇನ್ನಿತರೆ ಕೆಲಸಗಳಿಗಾಗಿ ಆರ್‌ಟಿಓ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಸಾರ್ವಜನಿಕ ಸಂಪರ್ಕ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ಮಾತನಾಡಿದ ವಿಕ್ರಂ ಹೇಳಿದರು.

ಹೊಸ ಲೈಸನ್ಸ್‌ ಪಡೆಯುವವರಿಗೆ ಲಿಖಿತ ಹಾಗೂ ಮೌಖಿಕ ಪರೀಕ್ಷೆ ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದರು.

English summary
Ten Tears Ago : Belgaum and Dharwar regional transport offices to be computerized in the near future. This is attempt to curb middlemen menace in obtaining driving licenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X