ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿನವರಾತ್ರಿ ಮಹೋತ್ಸವ
ಮಂಗಳೂರು : ದಕ್ಷಿಣ ಕನ್ನಡದ ಪವಿತ್ರ ಪುಣ್ಯಕ್ಷೇತ್ರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಜರುಗುತ್ತಿದೆ. ಅ.17ರಿಂದಲೇ ಆರಂಭವಾಗಿರುವ ಉತ್ಸವದಲ್ಲಿ ನವದುರ್ಗೆ ಹಾಗೂ ಶಾರಾದಾ ಮಾತೆಯ ಪೂಜೆ ವಿಜೃಂಭಣೆಯಿಂದ ನಡೆಯುತ್ತಿದೆ.
ಸರಸ್ವತಿ ಹಬ್ಬದ ಪ್ರಯುಕ್ತ ಅ.22ರ ಸೋಮವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಕುದ್ರೋಳಿ ದಸರಾ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಅ.22 ಮತ್ತು 23ರ ಸಂಜೆ 6-30ಕ್ಕೆ ಭದ್ರಗಿರಿ ಅಚ್ಯುತದಾಸರಿಂದ ಹರಿಕಥೆ, 24ರಂದು ಸಂಜೆ ಭರತನಾಟ್ಯ, 25ರಂದು ಜಾನಪದ ನೃತ್ಯ, ವೀಣಾವಾದನ ಏರ್ಪಡಿಸಲಾಗಿದೆ.
26ರಂದು ಶುಕ್ರವಾರ ಸಂಜೆ 5 ಗಂಟೆಗೆ ದೇವಾಲಯದಿಂದ ವೈಭವೋಪೇತ ದಸರಾ ಮೆರವಣಿಗೆ ಆರಂಭವಾಗಲಿದೆ. ಚೆಂಡೆ, ಡೋಲು, ಕುದ್ರೋಳಿ ಖ್ಯಾತಿಯ ಹುಲಿವೇಷ, ಜನಪದ ನೃತ್ಯಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ. 27ರ ಬೆಳಗ್ಗೆ ಶ್ರೀಕ್ಷೇತ್ರದ ಕೆರೆಯಲ್ಲಿ ವಿಶೇಷ ಪೂಜೆಯಾಂದಿಗೆ ವಿಸರ್ಜನೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷರಾದ ಸಾಯಿರಾಮ್ ತಿಳಿಸಿದ್ದಾರೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications