ಹೊಸಪೇಟೆ ಬಂದ್!ಜಿಲ್ಲಾ ಕೇಂದ್ರವಾಗಿ ರೂಪಿಸಲು ಒತ್ತಾಯ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ರೂಪಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅ.22 ರ ಸೋಮವಾರ ಹೊಸಪೇಟೆ ಬಂದ್ ನಡೆಸಲಾಗುತ್ತಿದೆ.
ಹೊಸಪೇಟೆ ಅಭಿವೃದ್ಧಿ ಪರ ಕ್ರಿಯಾ ಸಮಿತಿ ಬಂದ್ ಕರೆ ನೀಡಿದ್ದು , ಬಂದ್‌ಗೆ ವ್ಯಾಪಕ ಬೆಂಬಲ ದೊರೆತಿದೆ. ವಿವಿಧ ಕನ್ನಡಪರ ಸಂಘಟನೆಗಳು ಮಾತ್ರವಲ್ಲದೆ, ಸಂಯುಕ್ತ ಜನತಾದಳ, ಭಾರತೀಯ ಜನತಾಪಕ್ಷ ಹಾಗೂ ಬಿಎಸ್‌ಪಿ ಹೊಸಪೇಟೆ ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಿಸಿವೆ.
ಸ್ವತಂತ್ರ ಜಿಲ್ಲೆಯ ಸ್ಥಾನಮಾನ ನೀಡುವ ಮೂಲಕ ಹೊಸಪೇಟೆ ಪ್ರಾಂತ್ಯದ ಜನರ ಆಶೋತ್ತರಗಳು ಈಡೇರುವುದು ಸಾಧ್ಯ ಎಂದು ಹೊಸಪೇಟೆ ಅಭಿವೃದ್ಧಿ ಪರ ಕ್ರಿಯಾ ಸಮಿತಿ ಪಟ್ಟು ಹಿಡಿದಿದೆ.
(ಇನ್ಫೋ ವಾರ್ತೆ)












Click it and Unblock the Notifications