ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ಭಸ್ಮ ಮಾಡಿ : ನ್ಯೂಯಾರ್ಕ್‌ನಲ್ಲಿ ಅಮೆರಿಕ ಇಂಡಿಯನ್ನರ ಜಾಥಾ

By Super
|
Google Oneindia Kannada News

ನ್ಯೂಯಾರ್ಕ್‌ : 'ಭಯೋತ್ಪಾದನೆಗೆ ಹಿಂದೂಗಳ ವಿರೋಧವಿದೆ", 'ಭಾರತ- ಅಮೆರಿಕೆ ಜೊತೆಜೊತೆಗಿವೆ", 'ಅಮೆರಿಕನ್‌ ಇಂಡಿಯನ್‌ ಆಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ"... ನಗರದ ಬೀದಿಗಳಲ್ಲಿ ಭಾನುವಾರ ಘೋಷಣೆಗಳು ಮೆರೆದವು. ಅಮೆರಿಕಾದ ಬಾವುಟ ಗಾಳಿಯಾಡನೆ ಆಟವಾಡಿತು. ಭಾರತದ ತಮ್ಮೂರನ್ನು ಬಿಟ್ಟು ಬಂದು, ಇಲ್ಲಿ ನೆಲೆಯಾದವರು ಲ್ಯಾಡನ್‌ನನ್ನು ಮಟ್ಟ ಹಾಕುವುದರ ಮೂಲಕ ಭಯೋತ್ಪಾದನೆ ನಿರ್ಮೂಲನೆಗೆ ನಾಂದಿ ಹಾಡುವಂತೆ ಜಾಥಾ ನಡೆಸಿದರು.

ಅದೊಂದು ಸರ್ವಧರ್ಮ ಸಮಭಾವದ ಬಿಂಬವಾಗಿತ್ತು. ಹಿಂದೂ, ಸಿಖ್ಖ್‌, ಮುಸಲ್ಮಾನ, ಕಿರಸ್ತಾನ, ಬೌದ್ಧ, ಜೌನ, ಜುವೂ ಎಲ್ಲ ಧರ್ಮೀಯರ ಅನೂಹ್ಯ ಮೈತ್ರಿ. ನಾರ್ತ್‌ ಎಂಡ್‌ ಆಫ್‌ ಯೂನಿಯನ್‌ ಸ್ವೇರ್‌ನಲ್ಲಿ ಎಲ್ಲಾ ಧರ್ಮೀಯರ ಸಂಘ ಸಂಸ್ಥೆಗಳು ಒಟ್ಟು ಸೇರಿದ್ದವು. ಅಲ್ಲಿ ನೆರೆದಿದ್ದವರ ಪೈಕು ಚತ್ವಾಲ ಎಂಬುವರ ಪ್ರಕಾರ, ಭಾರತೀಯರು ಅದರಲ್ಲೂ ವಿಶೇ,ವಾಗಿ ಸಿಖ್ಖರು ಅಪ್ಪಿತಪ್ಪಿಯೂ ಭಯೋತ್ಪಾದನೆಯಾಂದಿಗೆ ತಳಕು ಹಾಕಿಕೊಂಡಿಲ್ಲ ಎಂಬುದನ್ನು ಅಮೆರಿಕ ಸರ್ಕಾರಕ್ಕೆ ಮನವರಿಕೆ ಮಾಡಿಸುವುದೇ ಜಾಥಾದ ಪ್ರಮುಖ ಗುರಿಯಾಗಿತ್ತು.

ಮಾತು ಮುಂದುವರೆಸಿದ ಚತ್ವಾಲ್‌, ನಾವು ಗಡ್ಡ ಬಿಟ್ಟು, ಪೇಟ ತೊಟ್ಟ ಮಾತ್ರಕ್ಕೆ ಬಿನ್‌ ಲ್ಯಾಡೆನ್‌ ಬಾಂಧವರು ಎಂದು ಅಮೆರಿಕದವರು ತಪ್ಪು ಭಾವಿಸುತ್ತಿದ್ದಾರೆ. ವಿವೇಚನೆ ಮಾಡದೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ನಾವು ಅಮೆರಿಕದ ಸಿಖ್ಖರು. ಲ್ಯಾಡೆನ್‌ ಜೀವಂತ ಅಥವಾ ಹೆಣವಾಗಿ ಸಿಕ್ಕಲಿ ಅನ್ನೋದೇ ನಮ್ಮ ಆಸೆ. ಭಯೋತ್ಪಾದನೆಗೆ ಎಂದೂ ನಮ್ಮ ಮತವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಕೂಡ ಅಮೆರಿಕದಲ್ಲಿದ್ದರು. ಜೊತೆಗೆ ದಿ ನ್ಯೂ ಯಾರ್ಕ್‌ ಟೈಮ್ಸ್‌ನ ಭಾನುವಾರದ ಸಂಚಿಕೆಯಲ್ಲಿ ಭಾರತದ ಪ್ರಧಾನಿ ಎ.ಬಿ.ವಾಜಪೇಯಿ ಅವರ ಒಂದು ಪುಟದ ಜಾಹೀರಾತು ಪ್ರಕಟವಾಗಿತ್ತು. ಹಿಂದೆಂದೂ ಅಮೆರಿಕೆಯಲ್ಲಿರುವ ಭಾರತದ ನಾಗರಿಕರು ಈ ರೀತಿಯ ದುರಂತ ಅನುಭವಿಸಿರಲಿಲ್ಲ. ಇಷ್ಟೊಂದು ಮಂದಿ ಸತ್ತಿರಲಿಲ್ಲ. ಇದೊಂದು ತುಂಬಲಾರದ ನಷ್ಟ ಎಂದು ವಾಜಪೇಯಿ ಪತ್ರಿಕೆಯ ಮೂಲಕ ಸಂದೇಶ ಕೊಟ್ಟಿದ್ದಾರೆ.

English summary
IndianAmericans held a prayer service in New York Sunday to encourage Washingtons fight against terrorism
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X