ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್‌ನಿಂದ ಪಾಕಿಸ್ತಾನ ರಾಜತಾಂತ್ರಿಕರ ವಾಪಸ್‌

By Staff
|
Google Oneindia Kannada News

ಇಸ್ಲಾಮಾಬಾದ್‌ : ತಾಲಿಬಾನ್‌ ವಿರುದ್ಧ ಸಮರಕ್ಕೆ ಅಮೆರಿಕಾ ಸಜ್ಜಾಗುತ್ತಿರುವಂತೆಯೇ ಪಾಕಿಸ್ತಾನ ತನ್ನ ರಾಜತಾಂತ್ರಿಕರನ್ನು ಕಾಬೂಲ್‌ನಿಂದ ವಾಪಸ್‌ ಕರೆಸಿಕೊಂಡಿದೆ. ಅಮೆರಿಕವು ಆಫ್ಘಾನಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧವಾಗಿರುವಾಗ ತನ್ನ ರಾಜತಾಂತ್ರಿಕರು ಅಲ್ಲಿರುವುದು ಸೂಕ್ತವಲ್ಲ ಎಂದು ಪಾಕ್‌ ಹೇಳಿದೆ.

ಅಧಿಕೃತವಾಗಿ ಯುದ್ಧ ಆರಂಭಕ್ಕೆ ಮುನ್ನ ಸಮರ ಸಿದ್ಧತೆಗಳ ಬಗ್ಗೆ ಮಾತುಕತೆ ನಡೆಸಲು ಅಮೆರಿಕ ಮಿಲಿಟರಿಯ ಉನ್ನತ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದೆ. ಈ ನಿಯೋಗ ಪಾಕ್‌ ಗಡಿಯಿಂದ ಆಫ್ಘಾನಿಸ್ತಾನಕ್ಕೆ ನುಗ್ಗುವ ಬಗ್ಗೆ ಪಾಕಿಸ್ತಾನದ ಮಿಲಿಟರಿ ಹಾಗೂ ಸರಕಾರದ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿದೆ ಎಂದು ವರದಿಗಳು ತಿಳಿಸಿವೆ.

  • ಅಮೆರಿಕದಲ್ಲಿರುವ ಒಸಾಮಾ ಬಿನ್‌ ಲಾಡೆನ್‌ಗೆ ಸೇರಿದ ಆಸ್ತಿ ಪಾಸ್ತಿ ಹಾಗೂ ಆತನ ಸಂಘಟನೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಜಾರ್ಜ್‌ ಬುಷ್‌ ಸೋಮವಾರ ಅಂಕಿತ ಹಾಕಿದ್ದಾರೆ.
  • ಯುದ್ಧ ಸಮಯದಲ್ಲಿ ಅಮೆರಿಕದ ವಿಮಾನಗಳಿಗೆ ಭಾರತದಲ್ಲಿ ಇಳಿಯಲು, ಇಂಧನ ಪೂರೈಸಲು ಮತ್ತು ವೈದ್ಯಕೀಯ ನೆರವು ನೀಡಲು ಭಾರತ ಸಮ್ಮತಿಸಿದೆ ಎಂದು ಮಿಲಿಟರಿ ಉನ್ನತಾಧಿಕಾರಿಗಳು ಹೇಳಿದ್ದಾರೆ.
  • ಇದೇನೂ ಹೊಸದಲ್ಲ. ಕೊಲ್ಲಿ ಯುದ್ಧಕಾಲದಲ್ಲೂ ಭಾರತ ಇಂತಹ ನೆರವು ನೀಡಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದಿಂದ ಇಂಧನ ಅಥವಾ ವೈದ್ಯಕೀಯ ನೆರವಿಗೆ ಅಧಿಕೃತ ಮನವಿ ಬಂದಿಲ್ಲ.
  • ಭಾರಿ ಸಂಖ್ಯೆಯ ಜೇಹಾದ್‌ಗಳಿಂದ ಕಾಬೂಲ್‌ ರಕ್ಷಣೆಗಾಗಿ ಕಾಶ್ಮೀರದಲ್ಲಿರುವ 4 ಸಾವಿರ ಉಗ್ರರು ಆಫ್ಘಾನಿಸ್ತಾನಕ್ಕೆ ವಾಪಸಾಗಿದ್ದಾರೆ ಎನ್ನಲಾಗಿದೆ.
  • ಪ್ರತಿಯುದ್ಧಕ್ಕಾಗಿ ತಾಲಿಬಾನ್‌ ಸಂಪನ್ಮೂಲ ಕ್ರೋಡೀಕರಣದಲ್ಲಿ ತೊಡಗಿದೆ.
  • ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್‌ ಸರಕಾರ ಕಂದಹಾರ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿ ವಶಪಡಿಸಿಕೊಂಡು, ಸಂಪರ್ಕ ಹಾಗೂ ಇನ್ನಿತರ ಕಾರ್ಯಾಚರಣೆಯನ್ನು ತಡೆಹಿಡಿದಿದೆ.
  • ಸೆ.11ರ ಉಗ್ರರ ಆಕ್ರಮಣದಿಂದ ಕುಸಿದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಡಿಯಲ್ಲಿ ಸಿಲುಕಿ ಸತ್ತವರ ಇಲ್ಲವೇ ನಾಪತ್ತೆಯಾಗಿರುವವ ಸಂಖ್ಯೆ 6,827ಕ್ಕೆ ಏರಿದೆ.
  • ರಾಜತಾಂತ್ರಿಕರನ್ನು ಕರೆಸಿಕೊಂಡಿದ್ದಾಗ್ಯೂ ಕೂಡ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳದಂತೆ ಪಾಕ್‌ಗೆ ಅಮೆರಿಕಾ ತಿಳಿಸಿದೆ.
  • ಸೆ.11ರಂದು ಅಮೆರಿಕ ಮೇಲೆ ನಡೆದ ದಾಳಿಗೆ ಒಸಾಮಾ ಬಿನ್‌ ಲಾಡೆನ್‌ನೇ ಹೊಣೆ ಎಂಬುದಕ್ಕೆ ತನ್ನ ಬಳಿ ಸಾಕಷ್ಟು ಪುರಾವೆ ಇದೆ ಎಂದಿರುವ ಅಮೆರಿಕ, ಸೂಕ್ತ ಸಮಯದಲ್ಲಿ ತನ್ನ ಮಿತ್ರರಾಷ್ಟ್ರಗಳೆದುರು ಈ ಸಾಕ್ಷ್ಯ ಪ್ರದರ್ಶಿಸಲಾಗುವುದು ಎಂದಿದೆ.
  • ಅಮೆರಿಕದಲ್ಲಿ ವಿವಿಧ ಧರ್ಮೀಯರು ಸೆ.11ರ ದುರಂತದಲ್ಲಿ ಮಡಿದವರ ಇಲ್ಲವೆ ನಾಪತ್ತೆಯಾದವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನಾ ಸಭೆ ನಡೆಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X