Get Updates
Get notified of breaking news, exclusive insights, and must-see stories!

ಬಯೋಟೆಕ್‌ ಪಾರ್ಕ್‌ಗೆ ಕೃಷಿ ವಿ.ವಿ.ಯಿಂದ 100 ಎಕರೆ ಭೂಮಿ

ಬೆಂಗಳೂರು : ಐಟಿ ಭರಾಟೆಯಿಂದ ಬಿಟಿಯತ್ತ ತೆರಳುತ್ತಿರುವ ನಗರದಲ್ಲಿ ಬಯೋಟೆಕ್ನಾಲಜಿ ಪಾರ್ಕ್‌ ಸ್ಥಾಪಿಸಲು ಸರಕಾರ ಉದ್ದೇಶಿಸಿದೆ. ಬೆಂಗಳೂರು ಕೃಷಿ ವಿಜ್ಞಾನ ವಿದ್ಯಾಲಯವು ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿರೋಧದ ನಡುವೆಯೂ 100 ಎಕರೆ ಜಾಗವನ್ನು ಬಿಟಿ ಪಾರ್ಕ್‌ಗಾಗಿ ನೀಡಲು ನಿರ್ಧರಿಸಿದೆ.

ಈ ಜಾಗದಲ್ಲಿ ಬಿಟಿ ಉದ್ಯಮಿಗಳಿಗೆ ತಮ್ಮ ಕಚೇರಿ ಮತ್ತು ಕಂಪೆನಿ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರಕಾರವು ಅನುಮತಿ ನೀಡಲಿದೆ. ಸರಕಾರದ ಒತ್ತಾಯದ ಮೇರೆಗೆ ಕೃಷಿ ವಿಶ್ವವಿದ್ಯಾನಿಲಯವು ಭೂಮಿ ನೀಡಲು ಒಪ್ಪಿದ್ದು, ಇದಕ್ಕಾಗಿ ಎಕರೆಗೆ ಒಂದು ಕೋಟಿ ರೂಪಾಯಿಯಂತೆ, 100 ಕೋಟಿ ರೂಪಾಯಿಗಳ ಪರಿಹಾರ ಧನ ನೀಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಈ ನೂರು ಎಕರೆ ಜಾಗದಲ್ಲಿ 30 ಎಕರೆಯನ್ನು ಬಿಟಿ ಪಾರ್ಕ್‌ ನಿರ್ಮಾಣ ಕಾರ್ಯಕ್ಕಾಗಿ ಬಳಸಲಾಗುವುದು. ಉಳಿದ 60 ಎಕರೆಯಲ್ಲಿ ಬಯೋಟೆಕ್‌ ಸಿಟಿ ತಲೆಯೆತ್ತಲಿದೆ. ಉಳಿದ ತಲಾ ಐದು ಎಕರೆ ಪ್ರದೇಶದಲ್ಲಿ ಬಿಟಿ ಅಧ್ಯಯನ ಕೇಂದ್ರ ಹಾಗೂ ರಾಜ್ಯ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ ಸ್ಥಾಪನೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಿಟಿ ಪಾರ್ಕ್‌ ಬೆಳೆಯಲಿದೆ.

ರಾಜ್ಯ ಐಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಅವರು ಕೃಷಿ ವಿಜ್ಞಾನ ವಿವಿಗೆ ಬರೆದ ಪತ್ರದಲ್ಲಿ 100 ಎಕರೆ ಜಾಗವನ್ನು ಬಿಟಿ ಪಾರ್ಕ್‌ಗಾಗಿ ಬಿಟ್ಟು ಕೊಡುವಂತೆ ಆಗ್ರಹಿಸಿದ್ದರು. ಇದನ್ನು ಒಪ್ಪಿ ಆಡಳಿತ ಮಂಡಳಿಯು ಜಾಗ ಬಿಟ್ಟುಕೊಡಲು ನಿರ್ಧರಿಸಿದೆ.

ಆದರೆ ವಿಶ್ವ ವಿದ್ಯಾಲಯದ ಅಧ್ಯಾಪಕರುವ ಮತ್ತು ವಿದ್ಯಾರ್ಥಿಗಳು ಬಿಟಿ ಪಾರ್ಕ್‌ಗಾಗಿ ತಮ್ಮ ವಿವಿಯ ಜಾಗವನ್ನು ಯಾಕೆ ಕಿತ್ತುಕೊಳ್ಳಬೇಕು ಎಂದು ಪ್ರಶ್ನಿಸುತ್ತಾರೆ. ಸರಕಾರವು ಬಿಟಿ ಪಾರ್ಕ್‌ ಸ್ಥಾಪಿಸುವ ವಿಷಯಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕಾಗಿ ನಗರದ ಹೊರವಲಯದಲ್ಲಿ ಸಾಕಷ್ಟು ಖಾಲಿ ಜಾಗ ಇರುವಾಗ ವಿಶ್ವ ವಿದ್ಯಾಲಯದ ಜಾಗವನ್ನೇ ಯಾಕೆ ಸರಕಾರ ಅಪೇಕ್ಷಿಸಬೇಕು ಎಂಬುದು ಅವರ ಪ್ರಶ್ನೆ.

ಬೆಂಗಳೂರು ಕೃಷಿ ವಿಜ್ಞಾನ ವಿವಿಯು ಒಟ್ಟು 700 ಎಕರೆ ಪ್ರದೇಶವನ್ನು ಹೊಂದಿದೆ. ವಿವಿಯ ಪ್ರತಿ ವಿದ್ಯಾರ್ಥಿಗೆ ಅಧ್ಯಯನಕ್ಕಾಗಿ ಅರ್ಧ ಎಕರೆ ಜಾಗದ ಅಗತ್ಯವಿದೆ. ಹಿಂದೆ ಮುಕ್ಕಾಲು ಎಕರೆ ಜಾಗವನ್ನು ವಿದ್ಯಾರ್ಥಿಯಾಬ್ಬನಿಗೆ ಮೀಸಲಿಡಲಾಗುತ್ತಿತ್ತು. ಆದರೆ ಈಗ ವಿದ್ಯಾರ್ಥಿಗಳ ಹೆಚ್ಚಳದಿಂದ ಎಕರೆ ಭೂಮಿಯನ್ನು ಎಂಟು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ. ಸರಕಾರ ಈಗ 100 ಎಕರೆಯನ್ನು ಪಡೆಯುತ್ತಿದ್ದು ವಿದ್ಯಾರ್ಥಿಗೆ ನೀಡುವ ಜಾಗದ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ.

ಅಲ್ಲದೆ ಈ ಜಾಗವನ್ನು ಸರಕಾರ ಬಿಟಿ ಉದ್ಯಮಿಗಳಿಗೆ ಮಾರಲಿದ್ದಾರೆ. ಐದಾರು ವರ್ಷಗಳ ಬಳಿಕ ಈ ಜಾಗ ಸಮರ್ಪಕವಾಗಿಲ್ಲ ಎಂಬ ಕಾರಣವೊಡ್ಡಿ ಬೇರೆ ಜಾಗವನ್ನು ಅಪೇಕ್ಷಿಸಿದರೆ ಎಂಬ ಸಂಶಯ ವಿವಿಯವರದು. ಈ ಹಿಂದೆ ಬಳ್ಳಾರಿ ಹೈವೇಗೂ ವಿವಿ ಜಾಗ ಬಿಟ್ಟುಕೊಟ್ಟಿತ್ತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+